ಜೊಮ್ಯಾಟೋ ಸವಾರನ ಫೋಟೋ ಸಖತ್ ವೈರಲ್

ಜೊಮ್ಯಾಟೋದಲ್ಲಿ ಗ್ರಾಹಕರಿಗೆ ಆಹಾರ ಪೂರೈಸುವ ಬೈಕ್ ರೈಡರ್ ಒಬ್ಬ ನಗುಮುಖದಲ್ಲಿ ಮಾತನಾಡುವ ಟಿಕ್ ಟಾಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 
ಜೊಮ್ಯಾಟೋ ಸವಾರನ ಫೋಟೋ ಸಖತ್ ವೈರಲ್
ಜೊಮ್ಯಾಟೋ ಸವಾರನ ಫೋಟೋ ಸಖತ್ ವೈರಲ್
Updated on

ನವದೆಹಲಿ: ಜೊಮ್ಯಾಟೋದಲ್ಲಿ ಗ್ರಾಹಕರಿಗೆ ಆಹಾರ ಪೂರೈಸುವ ಬೈಕ್ ರೈಡರ್ ಒಬ್ಬ ನಗುಮುಖದಲ್ಲಿ ಮಾತನಾಡುವ ಟಿಕ್ ಟಾಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 

ದೆಹಲಿ ಮೂಲದ ಜೊಮ್ಯಾಟೋದ ಡೆಲಿವರಿ ಬಾಯ್ ಸೋಮು ಎಂಬಾತ ತಾನು ಜೊಮ್ಯಾಟೋದಿಂದ ಕೈ ತುಂಬಾ ಸಂಪಾದಿಸುತ್ತೇನೆಂದು ಸಂತಸ ವ್ಯಕ್ತಪಡಿಸುವ ವಿಡಿಯೋ ಟಿಕ್ ಟಾಕ್ ನಲ್ಲಿ ಪ್ರಕಟಿಸಿದ್ದ. ಈತನ ಈ ನಗು ಮುಖ ಹಲವರ ಗಮನ ಸೆಳೆಯುತ್ತಿದೆ. 

ಈ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ 47 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಟ್ವಿಟರ್ ನಲ್ಲಿ 35,000 ಮಂದಿ ವೀಕ್ಷಿಸಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಪ್ರೊಪೈಲ್ ಫೋಟೋಗೆ ಸೋಮುವಿನ ಫೋಟೋವನ್ನೇ ಝೊಮ್ಯಾಟೋ ಹಾಕಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com