ತೆಲಂಗಾಣ, ದೆಹಲಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ: ಇರಾನ್, ಇಟಲಿ, ದಕ್ಷಿಣ ಕೊರಿಯಾ, ಸಿಂಗಾಪುರ ಪ್ರವಾಸ ಬೇಡ!

ಜಗತ್ತಿನಾದ್ಯಂತ ಭೀತಿಗೆ ಕಾರಣವಾಗಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದ್ದು,  ಎರಡಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಪಾಸಿಟಿವ್ ಕಂಡುಬಂದಿದೆ. ಎರಡು ವಾರಗಳ ಬಳಿಕ ಈ ಸೋಂಕು ತಗುಲಿದೆ ಎನ್ನಲಾಗಿದ್ದ ಕೇರಳದ ಮೂವರು ರೋಗಿಗಳು ಚೇತರಿಸಿಕೊಂಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಜಗತ್ತಿನಾದ್ಯಂತ ಭೀತಿಗೆ ಕಾರಣವಾಗಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದ್ದು,  ಎರಡಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಪಾಸಿಟಿವ್ ಕಂಡುಬಂದಿದೆ.ಎರಡು ವಾರಗಳ ಬಳಿಕ ಈ ಸೋಂಕು ತಗುಲಿದೆ ಎನ್ನಲಾಗಿದ್ದ ಕೇರಳದ ಮೂವರು ರೋಗಿಗಳು ಚೇತರಿಸಿಕೊಂಡಿದ್ದಾರೆ. 

 ಈ ಮಧ್ಯೆ ನವದೆಹಲಿಯಲ್ಲಿ ಒಂದು ಪ್ರಕರಣ ದೃಢಪಟ್ಟಿದ್ದರೆ, ತೆಲಂಗಾಣದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿಕೆಯಲ್ಲಿ ಇಂದು ತಿಳಿಸಿದೆ.

ಇಟಲಿ ಹಾಗೂ ಇರಾನ್ ನಲ್ಲಿ ಈ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಈಗ ಭಾರತದಲ್ಲಿಯೂ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. 

ಇಟಲಿ ಹಾಗೂ ದುಬೈಯಿಂದ ಇತ್ತೀಚಿಗೆ ಭಾರತಕ್ಕೆ ಇಬ್ಬರು ರೋಗಿಗಳು ಬಂದಿದ್ದಾಗಿ ಸರ್ಕಾರ ತಿಳಿಸಿದೆ. ಅವರ ಪ್ರವಾಸದ ಇತಿಹಾಸವನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ .

ಈ ಮೊದಲು ಚೀನಾದ ವುಹಾನ್ ನಿಂದ ಬಂದಿದ್ದ ಕೇರಳಕ್ಕೆ ಆಗಮಿಸಿದ್ದ ಮೂವರು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿತ್ತು.  

ದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಈ ಸೋಂಕು ತಗುಲಿರುವುದು ಮೃತಪಟ್ಟಿದ್ದರೆ ತೆಲಂಗಾಣದ ಕಾಸಗಿ ಆಸ್ಪತ್ರೆಯೊಂದರಲ್ಲಿ ಮತ್ತೊಬ್ಬರಿಗೂ ಸೋಂಕು ಇರುವುದು ತಿಳಿದುಬಂದಿದೆ. ದೇಶದಲ್ಲಿ  ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಮುದಾಯದ ನಿಗಾದಲ್ಲಿ ಇಡಲಾಗಿದೆ.

ಈ ಮಧ್ಯೆ ಇರಾನ್, ಇಟಲಿ, ದಕ್ಷಿಣ ಕೊರಿಯಾ, ಮತ್ತು ಸಿಂಗಾಪುರ ಪ್ರವಾಸ ಮಾಡಬೇಡಿ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಲಹೆ ನೀಡಿದ್ದಾರೆ. 

ದೇಶಾದ್ಯಂತ ಪ್ರಸ್ತುತ 37 ಮಂದಿ ಕೊರೋನಾ ವೈರಸ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತೀಯರನ್ನು ಸ್ಥಳಾಂತರಿಸುವ ಕುರಿತಂತೆ ಇರಾನ್ ಹಾಗೂ ಇಟಲಿಯ ಆಡಳಿತ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿರುವುದಾಗಿ  ಸಚಿವರು ತಿಳಿಸಿದ್ದಾರೆ.

3 ಸಾವಿರದ 217 ಮಂದಿ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಐವರಲ್ಲಿ ಪಾಸಿಟಿವ್ ಎಂಬುದು ಕಂಡುಬಂದಿದೆ. ಇನ್ನೂ 23 ಮಂದಿ ವರದಿಗಾಗಿ ಕಾಯುತ್ತಿದ್ದಾರೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

ಈ ಮಧ್ಯೆ ಚೀನಾದಲ್ಲಿ 42 ಹೊಸ ಸಾವು ನೋವು ಪ್ರಕರಣಗಳು ವರದಿಯಾಗಿದ್ದು, ಆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 2,912ಕ್ಕೆ ಏರಿಕೆ ಆಗಿದೆ. ಈ ಸೋಂಕು ಜಾಗತಿಕವಾಗಿ ತೀವ್ರಗತಿಯಲ್ಲಿ ಹರಡುತ್ತಿದ್ದು, 3 ಸಾವಿರ ಸಾವನ್ನಪ್ಪಿದ್ದು, 88 ಸಾವಿರಕ್ಕೂ ಹೆಚ್ಚು ಜನರು ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ಚೀನಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com