60 ನೇ ವಯಸ್ಸಿನಲ್ಲಿ ಮದುವೆಯಾದ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್

ಕಾಂಗ್ರೆಸ್ ನ ಹಿರಿಯ ನಾಯಕ ಮುಕುಲ್ ವಾಸ್ನಿಕ್(60) ವಿವಾಹವಾಗಿದ್ದಾರೆ. 
ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್
ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್
Updated on

ನವದೆಹಲಿ: ಕಾಂಗ್ರೆಸ್ ನ ಹಿರಿಯ ನಾಯಕ ಮುಕುಲ್ ವಾಸ್ನಿಕ್(60) ವಿವಾಹವಾಗಿದ್ದಾರೆ. 

ತಮ್ಮ ಬಹುಕಾಲದ ಸ್ನೇಹಿತೆ ರವೀನಾ ಖುರಾನಾ ಅವರನ್ನು ಮುಕುಲ್ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಪಂಚತಾರಾ ಹೋಟೆಲ್ ನಲ್ಲಿ ನಡೆದ ಈ ಸಮಾರಂಭದಲ್ಲಿ ಹಲವು ಹಿರಿಯ ಕಾಂಗ್ರೆಸ್ಸಿಗರು ಭಾಗಿಯಾಗಿದ್ದರು. 

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಹಿರಿಯ ಕಾಂಗ್ರೆಸ್ಸಿಗ ಅಹ್ಮದ್ ಪಟೇಲ್ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮುಕುಲ್ ವಾಸ್ನಿಕ್ ಮಹಾರಾಷ್ಟ್ರದ ಮಾಜಿ ಕಾಂಗ್ರೆಸ್ ನಾಯಕ ಬಾಲಕೃಷ್ಣ ವಾಸ್ನಿಕ್ ಅವರ ಮಗ. 

ಅಶೋಕ್ ಗೆಹ್ಲೋಟ್ ಮುಕುಲ್ ವಾಸ್ನಿಕ್-ರವೀನಾ ಖುರಾನ ಅವರಿಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. 

ಮಾಜಿ ಕೇಂದ್ರ ಸಚಿವ ಮನೀಷ್ ತಿವಾರಿ ಸಹ ವಾಸ್ನಿಕ್ ದಂಪತಿಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಮುಕುಲ್ ವಾಸ್ನಿಕ್ ಅವರು ಈ ವರೆಗೂ ಅವಹಿವಾಹಿತರಾಗಿದ್ದರು, ಕಳೆದ ವರ್ಷ ಆಗಸ್ಟ್ ನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಮುಂಚೂಣಿಯಲ್ಲಿತ್ತು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com