ಕೊರೋನಾ ವಾರಿಯರ್ಸ್'ಗೆ ಸೆಲ್ಯೂಟ್ ಹೊಡೆದ ಸೇನೆ: ಪುಷ್ಪವೃಷ್ಟಿಯ ಮೂಲಕ ಗೌರವ

ದೇಶದಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಭಾರತೀಯ ಸೇನೆ ಭಾನುವಾರ ವಿಶೇಷ ಗೌರವ ಸಲ್ಲಿಸಿದೆ. 
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹೂಮಳೆ ಸುರಿಸಿದ ಸೇನೆ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹೂಮಳೆ ಸುರಿಸಿದ ಸೇನೆ
Updated on

ನವದೆಹಲಿ: ದೇಶದಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಭಾರತೀಯ ಸೇನೆ ಭಾನುವಾರ ವಿಶೇಷ ಗೌರವ ಸಲ್ಲಿಸಿದೆ. 

ಹೆಲಿಕಾಪ್ಟರ್ ಮೂಲಕ ಕೊರೋನಾ ವಾರಿಯರ್ಸ್ ಗಳ ಮೇಲೆ ಹೂಮಳೆ ಸುರಿಸುವ ಮೂಲಕ ಸೇನೆ ಗೌರವ ಸಲ್ಲಿಸಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗಳೂ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತೀಯ ವಾಯುಸೇನೆಯ ವಿಮಾನಗಳು ಸಂಚರಿಸುವ ಮೂಲಕ ಕೊರೋನಾ ವಾರಿಯರ್ಸ್'ಗಳಿಗೆ ಗೌರವ ಸೂಚಿಸಿದೆ. 

ಕಳೆದ ಎರಡು ತಿಂಗಳುಗಳಿಂದ ಹಗಲು ರಾತ್ರಿ ಎನ್ನದೆ ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಪೊಲೀಸರು, ಪೌರಕಾರ್ಮಿಕರು, ಮಾಧ್ಯಮ ಪತ್ರಕರ್ತರು ಸೇರಿದಂತೆ ಹಲವು ಸಂಖ್ಯೆಯ ಸ್ವಯಂ ಸೇವಕರು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಕುಟುಂಬ ಹಾಗೂ ಸಂಸಾರದಿಂದ ದೂರ ಉಳಿದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರೆ. ಇವರೆಲ್ಲರೂ ಈ ಗೌರವಕ್ಕೆ ಅರ್ಹರಾಗಿದ್ದಾರೆ. 

ಈ ನಡುವೆ ವಿಧಾನಸೌಧದ ಮೇಲೂ ವಾಯುಸೇನೆ ಹೂಮಳೆ ಸುರಿಸಲಿದೆ. ಇಂದು ಮಧ್ಯಾಹ್ನ 3.30ರಿಂಗ 4 ಗಂಟೆ ಒಳಗಾಗಿ ಪುಷ್ಪವೃಷ್ಟಿ ಮೂಲಕ ಕೊರೋನಾ ವಾರಿಯರ್ಸ್'ಗೆ ವಿಶೇಷ ಗೌರವ ಸಲ್ಲಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com