ಸಣ್ಣ ಪ್ರಮಾಣದ ಲಕ್ಷಣಗಳಿರುವ ಕೋವಿಡ್-19 ರೋಗಿಗಳಿಗೆ ಡಿಸ್ಚಾರ್ಜ್ ಗೂ ಮುನ್ನ ಪರೀಕ್ಷೆ ಇಲ್ಲ: ಕೇಂದ್ರ ಸರ್ಕಾರ

ಕೋವಿಡ್-19 ಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 
ಸಣ್ಣ ಪ್ರಮಾಣದ ಲಕ್ಷಣಗಳಿರುವ ಕೋವಿಡ್-19 ರೋಗಿಗಳಿಗೆ ಡಿಸ್ಚಾರ್ಜ್ ಗೂ ಮುನ್ನ ಪರೀಕ್ಷೆ ಇಲ್ಲ: ಕೇಂದ್ರ ಸರ್ಕಾರ
ಸಣ್ಣ ಪ್ರಮಾಣದ ಲಕ್ಷಣಗಳಿರುವ ಕೋವಿಡ್-19 ರೋಗಿಗಳಿಗೆ ಡಿಸ್ಚಾರ್ಜ್ ಗೂ ಮುನ್ನ ಪರೀಕ್ಷೆ ಇಲ್ಲ: ಕೇಂದ್ರ ಸರ್ಕಾರ
Updated on: 

ನವದೆಹಲಿ: ಕೋವಿಡ್-19 ಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 

ಈ ವರೆಗೂ ಸಣ್ಣ ಪ್ರಮಾಣದ ರೋಗ ಲಕ್ಷಣಗಳಿರುವ ಕೋವಿಡ್-19 ರೋಗಿಗಳನ್ನು ಕೊರೋನಾ ಪರೀಕ್ಷೆ ನೆಗೆಟೀವ್ ಬರುವವರೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿರಲಿಲ್ಲ. ಆದರೆ ಈಗ ನಿಯಮಗಳನ್ನು ಸಡಿಲಿಸಲಾಗಿದ್ದು, ಸಣ್ಣ ಪ್ರಮಾಣದ ರೋಗ ಲಕ್ಷಣಗಳಿದ್ದರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ರೋಗಕಾರಕಗಳಿಗಾಗಿ ಪರೀಕ್ಷೆ ನಡೆಸದೇ ಇರಲು ತೀರ್ಮಾನಿಸಲಾಗಿದೆ. 

ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಸಣ್ಣ ಪ್ರಮಾಣದ ರೋಗ ಲಕ್ಷಣಗಳಿರುವವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ವೇಳೆ ಕೋವಿಡ್-19 ರೋಗಕಾರಕಗಳಿಗಾಗಿ ಟೆಸ್ಟ್ ಮಾಡಬೇಕಿಲ್ಲ ಎಂದು ಹೇಳಿದೆ. 

ಜ್ವರ ಸತತವಾಗಿ ಮೂರು ದಿನಗಳ ನಂತರವೂ ಕಾಣಿಸದೇ 10 ದಿನಗಳ ನಂತರವೂ ಆಕ್ರಮಣಕಾರಿ ರೋಗಲಕ್ಷಣಗಳು ಇಲ್ಲದೇ ಇದ್ದರೆ ಅಂತಹ ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದು ಡಿಸ್ಚಾರ್ಜ್ ಆಗುವ ರೋಗಿಗಳು ಮನೆಯಲ್ಲಿಯೇ ಇರಬೇಕೆಂಬ ನಿಯಮ ವಿಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com