ಆಂಧ್ರ, ಪಶ್ಚಿಮ ಬಂಗಾಳ ಹೊರತುಪಡಿಸಿ ದೇಶಾದ್ಯಂತ ಸೋಮವಾರದಿಂದ ವಿಮಾನ ಸೇವೆ ಪುನರ್ ಆರಂಭ

ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಹೊರತುಪಡಿಸಿದಂತೆ ಸೋಮವಾರದಿಂದ ದೇಶಾದ್ಯಂತ ವಿಮಾನ ಸೇವೆ ಪುನರ್ ಆರಂಭಗೊಳ್ಳಲಿದೆ.  ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ ಮೇ 26, ಮತ್ತು ಮೇ 28ರವರೆಗೂ ವಿಮಾನ ಸೇವೆ ಪುನರ್ ಆರಂಭವನ್ನು ಮುಂದೂಡಲು ನಿರ್ಧರಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಹೊರತುಪಡಿಸಿದಂತೆ ಸೋಮವಾರದಿಂದ ದೇಶಾದ್ಯಂತ ವಿಮಾನ ಸೇವೆ ಪುನರ್ ಆರಂಭಗೊಳ್ಳಲಿದೆ.  ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ ಮೇ 26, ಮತ್ತು ಮೇ 28ರವರೆಗೂ ವಿಮಾನ ಸೇವೆ ಪುನರ್ ಆರಂಭವನ್ನು ಮುಂದೂಡಲು ನಿರ್ಧರಿಸಿವೆ.

ದೇಶೀಯ ವಿಮಾನಗಳ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಘೋಷಿಸಿದ ಬೆನ್ನಲ್ಲೇ, ಆಗಸ್ಟ್ ಗೂ ಮುಂಚಿತವಾಗಿ ಕೆಲ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಶನಿವಾರ ಹೇಳಿಕೆ ನೀಡಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ನೀಡಿರುವ ಮಾಹಿತಿಯಂತೆ  ದೇಶಾದ್ಯಂತ 3867 ಜನರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು,  ಸೋಂಕಿತರ ಸಂಖ್ಯೆ 1.31 ಲಕ್ಷಕ್ಕೆ ಏರಿಕೆ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com