ಕೊರೋನಾ ಸೋಂಕು ಪರೀಕ್ಷೆ: 4,500 ರೂ. ಮಿತಿ ತೆಗೆದುಹಾಕಿದ ಐಸಿಎಂಆರ್, ದರ ನಿಗದಿ ಅಧಿಕಾರ ರಾಜ್ಯ ಸರ್ಕಾರಗಳಿಗೆ!

ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೊರೋನಾ ಸೋಂಕು ಪರೀಕ್ಷೆ ಮೇಲಿನ 4,500ರೂ ಮಿತಿ ತೆಗೆದು ಹಾಕಿದೆ.
ಕೊರೋನಾ ಟೆಸ್ಟ್
ಕೊರೋನಾ ಟೆಸ್ಟ್
Updated on: 

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೊರೋನಾ ಸೋಂಕು ಪರೀಕ್ಷೆ ಮೇಲಿನ 4,500ರೂ ಮಿತಿ ತೆಗೆದು ಹಾಕಿದೆ.

ಹೌದು.. ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೋನಾ ವೈರಸ್ ಸೋಂಕು ಪರೀಕ್ಷೆ ನಡೆಸಲು ನಿಗದಿಪಡಿಸಿದ್ದ 4,500ರೂ ಮಿತಿಯನ್ನು ಐಸಿಎಂಆರ್ ತೆಗದುಹಾಕಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಐಸಿಎಂಆರ್, 'ಪರೀಕ್ಷಾ ಸಾಮರ್ಥ್ಯ ಸ್ಥಿರವಾಗುತ್ತಿದೆ. ದೇಶೀಯವಾಗಿ  ನಿರ್ಮಿತಗೊಂಡಿರುವುದೂ ಸೇರಿದಂತೆ ವಿವಿಧ ಪರೀಕ್ಷಾ ಸಲಕರಣೆಗಳು ಮತ್ತು ಕಿಟ್‌ಗಳ ದೊರೆಯುವಿಕೆಯಿಂದಾಗಿ ದರ ಸ್ಪರ್ಧಾತ್ಮಕ ಹಾಗೂ ಕಡಿಮೆಯಾಗುತ್ತಿದೆ. ಈ ಬೆಳವಣಿಗೆಗಳನ್ನು ಹಾಗೂ ಪರೀಕ್ಷಾ ಕಿಟ್‌ಗಳ ಬೆಲೆ ಗಮನದಲ್ಲಿಟ್ಟುಕೊಂಡು ಈ ಹಿಂದೆ ನಿಗದಿಪಡಿಸಲಾಗಿದ್ದ ಗರಿಷ್ಠ  4,500 ರೂ ಅನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದೆ.

ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ ಭಾರ್ಗವ ಅವರು ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿನ ಈ ಬಗ್ಗೆ ಮಾಹಿತಿ ನೀಡಿದ್ದು, ಕಡಿಮೆ ದರ ನಿಗದಿಪಡಿಸುವ ಬದಲು ಆ ಕುರಿತು ಖಾಸಗಿ ಪ್ರಯೋಗಾಲಯಗಳ ಜತೆ ಮಾತುಕತೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ  ಸೂಚಿಸಲಾಗಿದೆ. 'ರಾಜ್ಯ ಸರ್ಕಾರಗಳ ಮೂಲಕ ಕಳುಹಿಸಲಾಗುವ ಮಾದರಿಗಳ ಮತ್ತು ವೈಯಯಕ್ತಿಕವಾಗಿ ಕಳುಹಿಸಲಾಗುವ ಮಾದರಿಗಳ ಪರೀಕ್ಷೆಗೆ ಒಮ್ಮತದ ದರ ನಿಗದಿಪಡಿಸಲು ಎಲ್ಲ ರಾಜ್ಯ ಸರ್ಕಾರಗಳು ಖಾಸಗಿ ಪ್ರಯೋಗಾಲಯಗಳ ಜೊತೆ ಮಾತುಕತೆ ನಡೆಸುವಂತೆ ಸಲಹೆ  ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಐಸಿಎಂಆರ್ ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲು ಮಾರ್ಚ್‌ನಲ್ಲಿ ಐಸಿಎಂಆರ್ ಗರಿಷ್ಠ 4,500 ರೂ ನಿಗದಿಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com