ಸಚಿವೆ ವಿರುದ್ಧ 'ಐಟಂ' ಹೇಳಿಕೆ: ಮಾಜಿ ಸಿಎಂ ಕಮಲ್ ನಾಥ್ ವಿರುದ್ಧ ಮತ್ತೆ ಗುಡುಗಿದ ಸಿಎಂ ಚೌಹಾಣ್

ಐಟಂ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿಕೆ ನೀಡಿದ ನಂತರ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೊಸ ವಾಗ್ದಾಳಿ ನಡೆಸಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
Updated on

ಅಗರ್ ಮಲ್ವ: ಐಟಂ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿಕೆ ನೀಡಿದ ನಂತರ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೊಸ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಚುನಾವಣಾ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಮಾಜಿ ಸಿಎಂ ಕಮಲ್ ನಾಥ್ ಗೆ ಏನಾಗಿದೆ, ನೀವು 74 ವರ್ಷದ ಹಿರಿಯರು, ನೀವು ನಮ್ಮ ಸಂಪುಟ ಸಚಿವೆ ಇಮರ್ತಿ ದೇವಿ ಬಗ್ಗೆ ಆಡಿರುವ ಮಾತನ್ನು ಪುನರುಚ್ಛರಿಸಲು ಸಾಧ್ಯವಿಲ್ಲ. ನಾವು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಕಮಲ್ ನಾಥ್ ಪ್ರತಿಯೊಬ್ಬರನ್ನೂ ಅವರನ್ನು ಸಹ ಐಟಂ ಎಂದು ಕರೆಯಲು ಪ್ರಾರಂಭಿಸಿದರು. ಯಾರಾದರೂ ಅವರ ತಾಯಿ ಅಥವಾ ಸೋದರಿಯನ್ನು ಐಟಂ ಎಂದು ಕರೆಯಲು ಇಷ್ಟಪಡುತ್ತಾರೆಯೇ, ಅದನ್ನು ನೀವು ಸಹಿಸಿಕೊಳ್ಳುತ್ತೀರಾ ಎಂದು ಸಿಎಂ ಚೌಹಾಣ್ ಪ್ರಶ್ನಿಸಿದರು.

ಇದಕ್ಕೂ ಮುನ್ನ ಕಮಲ್ ನಾಥ್ ಸಿಎಂಗೆ ತಾವು ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಸ್ಪಷ್ಟನೆ ನೀಡಿ ಪತ್ರ ಬರೆದಿದ್ದರು.ಇನ್ನು ಚುನಾವಣಾ ಆಯೋಗ ಮಧ್ಯ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿಯಲ್ಲಿ ವಿಸ್ತೃತ ವರದಿಯನ್ನು ಕೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com