ಉತ್ತರ ಪ್ರದೇಶ: ಗಂಡನಿಗೆ ಮಾಸಿಕ 1 ಸಾವಿರ ರೂ. ನಿರ್ವಹಣಾ ಭತ್ಯೆ ನೀಡುವಂತೆ ಪತ್ನಿಗೆ ಕೌಟುಂಬಿಕ ನ್ಯಾಯಾಲಯ ಆದೇಶ

ಗಂಡನಿಗೆ ಮಾಸಿಕ 1 ಸಾವಿರ ರೂ. ನಿರ್ವಹಣಾ ಭತ್ಯೆಯನ್ನು ನೀಡುವಂತೆ ಪತ್ನಿಗೆ ಇಲ್ಲಿನ ಕೌಟುಂಬಿಕ ನ್ಯಾಯಾಲಯವೊಂದು ನಿರ್ದೇಶನ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಝಾಫರ್ ನಗರ: ಗಂಡನಿಗೆ ಮಾಸಿಕ 1 ಸಾವಿರ ರೂ. ನಿರ್ವಹಣಾ ಭತ್ಯೆಯನ್ನು ನೀಡುವಂತೆ ಪತ್ನಿಗೆ ಇಲ್ಲಿನ ಕೌಟುಂಬಿಕ ನ್ಯಾಯಾಲಯವೊಂದು ನಿರ್ದೇಶನ ನೀಡಿದೆ.

ಈ ಸಂಬಂಧ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದಿಂದ ಪಿಂಚಣಿ ಬರುವ ಪತ್ನಿ ತನ್ನ ಗಂಡನಿಗೆ ನಿರ್ವಹಣಾ ಭತ್ಯೆ ಪಾವತಿಸಬೇಕೆಂದು ಸೂಚಿಸಿದೆ. ಪತಿ ಹಾಗೂ ಪತ್ನಿ ಹಲವು ವರ್ಷಗಳಿಂದ ಬೇರೆ ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ.

ಹಿಂದೂ ವಿವಾಹ ಕಾಯ್ದೆ 1955 ಅಡಿಯಲ್ಲಿ ಪತ್ನಿಯಿಂದ ನಿರ್ವಹಣಾ ಭತ್ಯೆ ನೀಡಲು ಕೋರಿ ಪತಿ 2013ರಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದ.

ನಿವೃತ್ತ ಸರ್ಕಾರಿ ನೌಕರರಾಗಿರುವ ಪತ್ನಿ ತಿಂಗಳಿಗೆ 12 ಸಾವಿರ ರೂ. ಪಿಂಚಣಿ ಪಡೆಯುತ್ತಿದ್ದು, ಗಂಡನಿಗೆ ನಿರ್ವಹಣಾ ಭತ್ಯೆಯಾಗಿ ಮಾಸಿಕ 1 ಸಾವಿರ ರೂಪಾಯಿ ನೀಡುವಂತೆ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಪ್ರಕಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com