ಪಕ್ಕದ ಮನೆ ಆಂಟಿಯಂತೆ ಕಾಣುವ ನಾನು 'ದೇವರ ಆಟ' ಎಂದು ಹೇಳಿದ್ದನ್ನು ವ್ಯಂಗ್ಯ ಮಾಡುತ್ತಿದ್ದಾರೆ: ನಿರ್ಮಲಾ ಸೀತಾರಾಮನ್

ಒಬ್ಬ ಸರಳ ಹಣಕಾಸು ಸಚಿವೆ 'ಇದು ದೇವರ ಆಟ' ಎಂದು ಹೇಳಿದ ಮಾತುಗಳನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಅದೇ 'ಫೋರ್ಸ್ ಮಜೂರ್' ಎಂಬ ಶಬ್ದವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on: 

ನವದೆಹಲಿ:ಒಬ್ಬ ಸರಳ ಹಣಕಾಸು ಸಚಿವೆ' ಇದು ದೇವರ ಆಟ'ಎಂದು ಹೇಳಿದ ಮಾತುಗಳನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಅದೇ 'ಫೋರ್ಸ್ ಮಜೂರ್' ಎಂಬ ಶಬ್ದವನ್ನು ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಗಳನ್ನು ಪ್ರತಿಪಕ್ಷದವರು ಸೇರಿದಂತೆ ಹಲವರು ಟೀಕಿಸಿದರು ಏಕೆಂದರೆ ನಾನು ನೋಡಲು ಸರಳವಾಗಿ ಪಕ್ಕದ ಮನೆಯ ಆಂಟಿಯಂತೆ ಕಾಣುತ್ತೇನೆ, ಆದರೆ ಅಂದು ನಾನು ಆಡಿರುವ ಮಾತುಗಳನ್ನು ತಿರುಚಿದ್ದು ನೋಡಿದರೆ ವಿರೋಧ ಪಕ್ಷದವರ ಬೇಜವಾಬ್ದಾರಿ ವರ್ತನೆ ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಆಗಸ್ಟ್ 27ರಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ಕೋವಿಡ್-19 ಸಾಂಕ್ರಾಮಿಕದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟು ಹೋಗಿದೆ. ಇದೆಲ್ಲ ದೇವರ ಆಟ, ಹಣಕಾಸಿನ ಮೇಲೆ ಇದು ಪರಿಣಾಮವನ್ನುಂಟುಮಾಡಿದೆ ಎಂದಿದ್ದರು. ಅವರು ಇಷ್ಟು ಹೇಳಿದ್ದೇ ತಡ, ದೇಶಾದ್ಯಂತ ಹಲವರು ಇದಕ್ಕೆ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಅನೇಕ ಜನರು ಜಿಎಸ್ಟಿ ಪರಿಹಾರದ ವಿಷಯದಲ್ಲಿ ಮಾತನಾಡಿದರು, ನನ್ನ ದೇವರ ಆಟ ಹೇಳಿಕೆಯನ್ನು ಹಲವಾರು ಬಾರಿ ಹಲವು ರೀತಿಯಲ್ಲಿ ಉಲ್ಲೇಖಿಸಿದ್ದಾರೆ. ಅದಕ್ಕಾಗಿ ನನಗೆ ಸಂತೋಷವಾಗಿದೆ. ಅಸಾಮಾನ್ಯ ಪರಿಸ್ಥಿತಿಯನ್ನು ವ್ಯಕ್ತಪಡಿಸಲು ಜನರು ಮಜೂರ್ ಎಂಬ ಲ್ಯಾಟಿನ್ ಅಭಿವ್ಯಕ್ತಿಯನ್ನು ಬಳಸಲು ಇಷ್ಟಪಡುತ್ತಾರೆ. ಆದರೆ ಸರಳ ಮಹಿಳಾ ಹಣಕಾಸು ಸಚಿವೆಯಾದ ನಾನು  ದೇವರ ಆಟ ಎಂದು ಹೇಳಿದೆ, ಅದನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ. ಏನ್ಸಾರ್ ಇದು ಎಂದು ಲೋಕಸಭಾಧ್ಯಕ್ಷರನ್ನು ಪ್ರಶ್ನಿಸಿದರು.

ಕಕ್ಷಿದಾರರಿಗೆ ಕೋರ್ಟ್ ನಲ್ಲಿ ಬಲವಂತದ ಮಜೂರ್ ಹೇಳಿಕೆ ಹೊಂದಿಕೆಯಾಗುತ್ತದೆ, ಆದರೆ ದೇವರ ಆಟ ಆಗುವುದಿಲ್ಲ, ಯಾಕೆಂದರೆ ನಾನು ಹಣಕಾಸು ಸಚಿವೆ ಪಕ್ಕದ ಮನೆ ಆಂಟಿ ಥರ ಕಾಣುತ್ತೇನೆ ಅಲ್ಲವೇ ಎಂದು ನಿರ್ಮಲಾ ಸೀತಾರಾಮನ್ ಬೇಸರದಿಂದ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com