ದೆಹಲಿ  ಹಿಂಸಾಚಾರ: 20 ಕ್ಕೇರಿದ ಸಾವಿನ ಸಂಖ್ಯೆ, ಪರಿಸ್ಥಿತಿ ಕುರಿತು ಸಂಪುಟ, ಪ್ರಧಾನಿಗೆ ವರದಿ ಸಲ್ಲಿಸಲಿರುವ ದೋವಲ್

ಪೌರತ್ವ ತಿದ್ದುಪಡಿ ಪರ-ವಿರೋಧವಾಗಿ ಈಶಾನ್ಯ ದೆಹಲಿಯಲ್ಲಿ ಶನಿವಾರ ಸಣ್ಣ ಪ್ರಮಾಧಲ್ಲಿ ಆರಂಭವಾಗಿ, ಭಾನುವಾರ-ಸೋಮವಾರಗಳಂದು ಹಿಂಸಾಚಾರ ರೂಪ ಪಡೆದುಕೊಂಡಿದ್ದ ಪ್ರತಿಭಟನೆ, ಮಂಗಳವಾರ ರಕ್ತಪಾತಕ್ಕೆ ಕಾರಣವಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೂ ಜಫ್ರಾಬಾದ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಹಿಂಸಾಚಾರ ನಡೆಸಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. 
ದೆಹಲಿ  ಹಿಂಸಾಚಾರ: 20ಕ್ಕೇರಿದ ಸಾವಿನ ಸಂಖ್ಯೆ, ಹಿಂಸೆ ಹತ್ತಿಕ್ಕಲು ಕಂಡಲ್ಲಿ ಗುಂಡು
ದೆಹಲಿ ಹಿಂಸಾಚಾರ: 20ಕ್ಕೇರಿದ ಸಾವಿನ ಸಂಖ್ಯೆ, ಹಿಂಸೆ ಹತ್ತಿಕ್ಕಲು ಕಂಡಲ್ಲಿ ಗುಂಡು

ಹೊತ್ತಿ ಉರಿದ ಈಶಾನ್ಯ ದೆಹಲಿ: ದುಷ್ಕರ್ಮಿಗಳಿಂದ ಶೂಟೌಟ್, 150 ಮಂದಿ ಗಾಯ, 35 ಜನರ ಸ್ಥಿತಿ ಗಂಭೀರ

ನವದೆಹಲಿ: ಪೌರತ್ವ ತಿದ್ದುಪಡಿ ಪರ-ವಿರೋಧವಾಗಿ ಈಶಾನ್ಯ ದೆಹಲಿಯಲ್ಲಿ ಶನಿವಾರ ಸಣ್ಣ ಪ್ರಮಾಧಲ್ಲಿ ಆರಂಭವಾಗಿ, ಭಾನುವಾರ-ಸೋಮವಾರಗಳಂದು ಹಿಂಸಾಚಾರ ರೂಪ ಪಡೆದುಕೊಂಡಿದ್ದ ಪ್ರತಿಭಟನೆ, ಮಂಗಳವಾರ ರಕ್ತಪಾತಕ್ಕೆ ಕಾರಣವಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೂ ಜಫ್ರಾಬಾದ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಹಿಂಸಾಚಾರ ನಡೆಸಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. 

ಘಟನೆಯಲ್ಲಿ 50 ಪೊಲೀಸರು ಸೇರಿದಂತೆ 180 ಮಂದಿ ಗಾಯಗೊಂಡಿದ್ದು, ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಹಿಂಸಾಚಾರ ಹತ್ತಿಕ್ಕಲು ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಜಫ್ರಾಬಾದ್, ಮೌಜ್ ಪುರ, ಭಜನ್ ಪುರ ಚೌಕ್, ಚಾಂದ್ ಬಾಗ್, ಕರ್ವಾಲ್ ನಗರ್, ಖುರೇಜಿ ಖಾಸ್, ಬಾಬರ್ ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ಈ ನಡುವ ಪ್ರತಿಭಟನೆಗಳ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೂ ದಾಳಿಗಳು ನಡೆದಿದ್ದು, ಕಲ್ಲು, ದೊಣ್ಣೆ ಮಾತ್ರವಲ್ಲದೆ, ದುಷ್ಕರ್ಮಿಗಳು ಗುಂಡು ಹಾರಿಸಿ ದಾಳಿ ನಡೆಸಿದ್ದಾರೆ. 

ದಾಳಿಯಲ್ಲಿ ಕನಿಷ್ಠ ಐದಾರು ಪತ್ರಕರ್ತರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಕೆಲವು ಕಡೆ ಪತ್ರಕರ್ತರು, ಜನರ ಧರ್ಮ ಕೇಳಿ ಉದ್ರಿಕ್ತರು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಪ್ರತಿಭಟನಾ ಸ್ಥಳಕ್ಕೆ ದೋವಲ್ ಭೇಟಿ

ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭೇಟಿ ನೀಡಿದ್ದು, ಭದ್ರತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಈಶಾನ್ಯ ಭಾಗದ ದೆಹಲಿ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ದೋವಲ್ ಅವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ತಡರಾತ್ರಿ ಅಧಿಕಾರಿಗಳೊಂದಿಗೆ ಮಾತುಕತೆ ಮಾತುಕತೆ ನಡೆಸಿದರು ಎಂದು ವರದಿಗಳು ತಿಳಿಸಿವೆ. 

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸೀಲಂಪುರ್, ಜಫ್ರಾಬಾದ್, ಮೌಜ್ಪುರ ಮತ್ತು ಗೋಕುಲ್ಪುರಿ ಚೌಕ್ ಪ್ರದೇಶಗಳಿಗೆ ಭೇಟಿ ನೀಡಿದ ದೋವಲ್ ಅವರು, ಪರಿಸ್ಥಿತಿ ಅವಲೋಕಿಸಿಸಿದರು.  ಇದರಂತೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿರುವ ದೋವಲ್ ಅವರು ಪರಿಸ್ಥಿತಿ ಕುರಿತು ವರದಿ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ. 

ಭೇಟಿ ವೇಳೆ ಪ್ರತಿಕ್ರಿಯೆ ನೀಡಿರುವ ದೋವಲ್ ಅವರು, ಕಾನೂನುಬಾಹಿರತೆಯನ್ನು ರಾಷ್ಟ್ರೀಯವಾಗಿ ಉಳಿಯಲು ಬಿಡುವುದಿಲ್ಲ. ಹಿಂಸಾಚಾರ ಹತ್ತಿಕ್ಕಲು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರಿಗೆ ಮುಕ್ತ ಹಸ್ತವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. 

ಪ್ರತಿಭಟನೆ ಹಿನ್ನೆಲೆ ಶಾಲಾ-ಕಾಲೇಜುಗಳು ಬಂದ್, ಮೆಟ್ರೋ ಸಂಚಾರ ಪುನರಾರಂಭ

ಹಿಂಸಾಚಾರ ಮುಂದುವರೆದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆಗಳನ್ನು ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರತಿಭಟನೆಯಿಂದಾಗಿ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಅಧಿಕಾರಿಗಳು ನಿರಂತರ ಯತ್ನಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಿದ್ದು, ಪ್ರವೇಶ ಹಾಗೂ ನಿರ್ಗಮನದ ದ್ವಾರಗಳನ್ನು ತೆರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ. 

ನಡೆದಿದ್ದೇನು?

ಸಿಎಎ ವಿರುದ್ಧ ದೆಹಲಿಯ ಜಫ್ರಾಬಾದ್ ನಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ಆರಂಭಿಸಿದ್ದರು. ಅದೇ ಪ್ರದೇಶದಲ್ಲಿ ಸಿಎಎ ಪರ ರ್ಯಾಲಿಯ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕ ಕೆಪಿಎಲ್ ಮಿಶ್ರಾ, ಟ್ರಂಪ್ ಭಾರತದಿಂದ ತೆರಳುವವರೆಗೆ ಸುಮ್ಮನಿರುತ್ತೇವೆ. 3 ದಿನದಲ್ಲಿ ಸಿಎಎ ವಿರೋಧಿಗಳನ್ನು ತೆರವುಗೊಳಿಸದಿದ್ದಲ್ಲಿ ಪರಿಣಾಮ ನೆಟ್ಟಗಿರಲ್ಲ ಎಂದಿದ್ದರು. ಮರುದಿನ ಆರಂಭವಾದ ಸಣ್ಣ ಘರ್ಷಣೆ, ಸೋಮವಾರ ಹಿಂಸಾರೂಪ ಪಡೆದುಕೊಂಡಿತು. ಮಂಗಳವಾರ ಗಂಭೀರವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com