ದೇಶದಲ್ಲಿ ಒಂದೇ ದಿನ 52,123 ಕೊರೋನಾ ಕೇಸ್; ಸೋಂಕಿತರ ಸಂಖ್ಯೆ 15.8 ಲಕ್ಷ, 10 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖ

ದೇಶದಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಮತ್ತೊಮ್ಮೆ ದಾಖಲೆಯ ಜಿಗಿತಕಂಡಿದೆ. ಗುರುವಾರ ಬರೋಬ್ಬರಿ 52,123 ಮಂದಿಯಲ್ಲಿ ಸೊಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಮತ್ತೊಮ್ಮೆ ದಾಖಲೆಯ ಜಿಗಿತಕಂಡಿದೆ. ಗುರುವಾರ ಬರೋಬ್ಬರಿ 52,123 ಮಂದಿಯಲ್ಲಿ ಸೊಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಜು.23ರಂದು 50,904 ಕೇಸ್ ಹಾಗೂ 11790 ಸಾವು ದಾಖಲಾಗಿತ್ತು ಈವರೆಗಿನ ಗರಿಷ್ಠ ಎನಿಸಿಕೊಂಡಿತ್ತು. ಆ ಬಳಿಕ ದೈನಂದಿನ ಸೋಂಕಿನ ಪ್ರಮಾಣ ಕೊಂಚ ಕಡಿಮೆಯಾಗಿತ್ತಾದರೂ ಮಂಗಳವಾರ ಮತ್ತೊಮ್ಮೆ 50 ಸಾವಿರ ಗಡಿ ದಾಟಿತ್ತು. 

ಇದೇ ವೇಳೆ ಒಂದೇ ದಿನ 775 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 34,968ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಮೃತರ ಸಂಖ್ಯೆ 35 ಸಾವಿರದ ಗಡಿ ಸಮೀಪಿಸಿದೆ. ಮೃತರ ಸಂಖ್ಯೆ ಇದೇ ರೀತಿ ಮುಂದುವರೆದರೆ ಭಾರತವು ಇಟಲಿ (35,129)ಯನ್ನು ಹಿಂದಿಕ್ಕಿ 5 ಸ್ಥಾನಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. 

ಅಮೆರಿಕಾ (1.49ಲಕ್ಷ) ಪ್ರಥಮ ಸ್ಥಾನದಲ್ಲಿದ್ದರೆ, ಬ್ರೆಜಿಲ್ (88 ಸಾವಿರ) 2ನೇ ಸ್ಥಾನದಲ್ಲಿದೆ. ಬ್ರಿಟನ್ (45 ಸಾವಿರ), ಮೂರನೇ ಸ್ಥಾನ ಹಾಗೂ ಮೆಕ್ಸಿಕೋ (44 ಸಾವಿರ) 5ನೇ ಸ್ಥಾನದಲ್ಲಿದೆ. 

ಈ ನಡುವೆ ದೇಶದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 10 ಲಕ್ಷ ಗಡಿದಾಟಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 10,20,582ಕ್ಕೆ ಏರಿಕೆಯಾಗಿದೆ. ಇನ್ನೂ ದೇಶದಲ್ಲಿ 5,28,242 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com