ಟಿಕ್ ಟಾಕ್ ಸೇರಿದಂತೆ 59 ಚೀನಾ ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ!

ಚೀನಾದೊಂದಿಗೆ ಭೌಗೋಳಿಕ- ರಾಜಕೀಯ ಭಿನ್ನಾಭಿಪ್ರಾಯ ಭುಗಿಲೆದ್ದಿರುವಂತೆ ಟಿಕ್ ಟಾಕ್, ಶೇರ್ ಹಿಟ್, ಹಲೋ ಆ್ಯಪ್ ಸೇರಿದಂತೆ 59 ಚೀನಾ ಆ್ಯಪ್ ಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರದ ಇಂದು ಮಹತ್ವದ ಆದೇಶ ಹೊರಡಿಸಿದೆ.
ಟಿಕ್ ಟಾಕ್
ಟಿಕ್ ಟಾಕ್

ನವದೆಹಲಿ: ಚೀನಾದೊಂದಿಗೆ ಭೌಗೋಳಿಕ- ರಾಜಕೀಯ ಭಿನ್ನಾಭಿಪ್ರಾಯ ಭುಗಿಲೆದ್ದಿರುವಂತೆ ಟಿಕ್ ಟಾಕ್, ಶೇರ್ ಹಿಟ್, ಹಲೋ ಆ್ಯಪ್ ಸೇರಿದಂತೆ 59 ಚೀನಾ ಆ್ಯಪ್ ಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಇಂದು ಮಹತ್ವದ ಆದೇಶ ಹೊರಡಿಸಲಾಗಿದೆ.

ಈ ಸಂಬಂಧ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ದೇಶದ ಸಮಗ್ರತೆ ಮತ್ತು ಏಕತೆ, ದೇಶದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ 59 ಆ್ಯಪ್ ಗಳನ್ನು  ನಿರ್ಬಂಧಿಸಲು ನಿರ್ಧರಿಸಲಾಗಿದೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com