ಕೋವಿಡ್ ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಾರಾಷ್ಟ್ರ ಕಾಂಗ್ರೆಸ್‌ ಶಾಸಕ ರಾವ್‌ಸಾಹೇಬ್‌ ಅಂತಪುರ್ಕರ್‌ ನಿಧನ

ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ರಾವ್‍ಸಾಹೇಬ್ ಅಂತಪುರ್ಕರ್ ಮುಂಬೈ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು
ಶಾಸಕ ರಾವ್‍ಸಾಹೇಬ್ ಅಂತಪುರ್ಕರ್
ಶಾಸಕ ರಾವ್‍ಸಾಹೇಬ್ ಅಂತಪುರ್ಕರ್
Updated on: 

ಮುಂಬೈ: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ರಾವ್‍ಸಾಹೇಬ್ ಅಂತಪುರ್ಕರ್ ಮುಂಬೈ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು

ಕೋವಿಡ್‌ ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ನಾಂದೇಡ್ ಜಿಲ್ಲೆಯ ದೇಗ್ಲೂರ್‌ ವಿಧಾನಸಭೆ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆಯಾಗಿದ್ದರು.

ರಾವ್‌ಸಾಹೇಬ್‌ ಅಂತಪುರ್ಕರ್‌ ಅವರು ಕೋವಿಡ್ ನಂತರ ಕಾಣಿಸಿಕೊಂಡಿದ್ದ ಆರೋಗ್ಯ ಸಂಬಂಧಿ ತೊಂದರೆಗಳಿಗಾಗಿ ಮುಂಬೈನ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ ಸಾವನ್ನಪ್ಪಿದರು ಎಂದು ಮೂಲಗಳು ಶನಿವಾರ ತಿಳಿಸಿವೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಏಪ್ರಿಲ್ 1ರಿಂದ ವೆಂಟಿಲೇಟರ್‌ ನೆರವು ನೀಡಲಾಗಿತ್ತು. ಅಂತಪುರ್ಕರ್ ಕೋವಿಡ್-19ನಿಂದಾಗಿ ಮೃತಪಟ್ಟಿರುವ ಮಹಾರಾಷ್ಟ್ರದ ಎರಡನೇ ಶಾಸಕರಾಗಿದ್ದಾರೆ.

ಈ ಹಿಂದೆ ಪಂಧರ್ಪುರ ಎನ್ ಸಿಪಿ ಶಾಸಕ ಭರತ್ ಭಾಲ್ಕೆ ಅವರು ನವೆಂಬರ್ 28ರಂದು ಕೋವಿಡ್ ಸೋಂಕಿನ ಬಳಿಕ ಉಂಟಾದ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com