ಕಾಬೂಲ್ ನಿಂದ ಭಾರತಕ್ಕೆ ಆಗಮಿಸಿದ ನಂತರ ಶಿಶುವಿಗೆ ಮುತ್ತಿಕ್ಕಿ ಮುದ್ದಾಡಿದ ಬಾಲಕಿ: ಹೃದಯಸ್ಪರ್ಶಿ ವಿಡಿಯೋ

ಇಬ್ಬರು ಅಫ್ಘಾನ್ ಸೆನೆಟರ್, 107 ಭಾರತೀಯ ನಾಗರಿಕರು ಸೇರಿದಂತೆ 168 ಜನರನ್ನು ಇಂದು ವಿಶೇಷ ವಾಯುಪಡೆ ವಿಮಾನವೊಂದರ ಮೂಲಕ ಕಾಬೂಲ್ ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ದೆಹಲಿ ಬಳಿಯ ಗಾಜಿಯಾಬಾದ್ ನ ಹಿಂಡಾನ್ ವಾಯುನೆಲೆಯಲ್ಲಿ ವಿಮಾನ ಸುರಕ್ಷಿತವಾಗಿ ಬಂದು ಆಗಮಿಸಿತು. 
ಶಿಶುವಿಗೆ ಮುತ್ತಿಕ್ಕುತ್ತಿರುವ ಬಾಲಕಿ
ಶಿಶುವಿಗೆ ಮುತ್ತಿಕ್ಕುತ್ತಿರುವ ಬಾಲಕಿ
Updated on

ನವದೆಹಲಿ: ಇಬ್ಬರು ಅಫ್ಘಾನ್ ಸೆನೆಟರ್, 107 ಭಾರತೀಯ ನಾಗರಿಕರು ಸೇರಿದಂತೆ 168 ಜನರನ್ನು ಇಂದು ವಿಶೇಷ ವಾಯುಪಡೆ ವಿಮಾನವೊಂದರ ಮೂಲಕ ಕಾಬೂಲ್ ನಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ. ದೆಹಲಿ ಬಳಿಯ ಗಾಜಿಯಾಬಾದ್ ನ ಹಿಂಡಾನ್ ವಾಯುನೆಲೆಯಲ್ಲಿ ವಿಮಾನ ಸುರಕ್ಷಿತವಾಗಿ ಬಂದು ಆಗಮಿಸಿತು. 

ಈ ವಿಮಾನ ವಾಯುನೆಲೆಯಲ್ಲಿ ಬಂದಿಳಿಯುತ್ತಿದ್ದಂತೆ ತಾಯಿ ಕಂಕುಳಲ್ಲಿದ್ದ ಶಿಶುವೊಂದಕ್ಕೆ ಹಿರಿಯ ಬಾಲಕಿ ಸಂತೋಷದಿಂದ ಮುತ್ತಿಕ್ಕಿ ಮುದ್ದಾಡುವ ವಿಡಿಯೋವೊಂದು ಹೃದಯ ಸ್ಪರ್ಶಿಯಾಗಿದೆ.

ಎಎನ್ ಐ ಸುದ್ದಿಸಂಸ್ಥೆ ಈ ವಿಡಿಯೋವನ್ನು ಹಂಚಿಕೊಂಡಿದೆ. ಮಹಿಳೆ ಕೂಡಾ ಕಳೆದ ಕಳೆದ ಏಳು ದಿನಗಳಿಂದ ಕಾಬೂಲ್ ನಲ್ಲಿ ಕಳೆದ ಭಾವನಾತ್ಮಕ ಮತ್ತು ದೈಹಿಕ ಒತ್ತಡದ ಬಗ್ಗೆ ಮಾತನಾಡುವುದನ್ನು ವಿಡಿಯೋದಲ್ಲಿ ಕೇಳಬಹುದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com