ಜುಲೈ 8 ರಂದು ವೈಎಸ್‌ಆರ್‌ ಶರ್ಮಿಳಾ ಪಕ್ಷ ಆರಂಭ

ತೆಲಂಗಾಣದಲ್ಲಿ ವೈ.ಎಸ್.ಆರ್.‌ ಶರ್ಮಿಳಾ ಪಕ್ಷ ವೈ ಎಸ್ ಆರ್‌ ಜಯಂತಿ ದಿನವಾದ ಜುಲೈ8 ರಂದು ಸ್ಥಾಪನೆಗೊಳ್ಳಲಿದೆ ಎಂದು ಪಕ್ಷದ ಸಮನ್ವಯಧಿಕಾರಿ ವಡುಗಾ ರಾಜಗೋಪಾಲ್ ತಿಳಿಸಿದ್ದಾರೆ.
ವೈಎಸ್ ಆರ್ ಶರ್ಮಿಳಾ
ವೈಎಸ್ ಆರ್ ಶರ್ಮಿಳಾ
Updated on

ಹೈದರಾಬಾದ್: ತೆಲಂಗಾಣದಲ್ಲಿ ವೈ.ಎಸ್.ಆರ್.‌ಶರ್ಮಿಳಾ ಪಕ್ಷ ವೈಎಸ್ಆರ್‌ ಜಯಂತಿ ದಿನವಾದ ಜುಲೈ8 ರಂದು ಸ್ಥಾಪನೆಗೊಳ್ಳಲಿದೆ ಎಂದು ಪಕ್ಷದ ಸಮನ್ವಯಧಿಕಾರಿ ವಡುಗಾ ರಾಜಗೋಪಾಲ್ ತಿಳಿಸಿದ್ದಾರೆ.

ಪಕ್ಷದ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೈಎಸ್‌ ಆರ್‌ ತೆಲಂಗಾಣ ಪಕ್ಷಕ್ಕೆ (ವೈಎಸ್‌ಆರ್‌ಟಿಪಿ) ನೋಂದಣಿಯ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ನೂತನ ರಾಜಕೀಯ ಪಕ್ಷದ ಹೆಸರಿಗೆ ಸಂಬಂಧಿಸಿದಂತೆ ತಮ್ಮ ಯಾವುದೇ ಆಕ್ಷೇಪವಿಲ್ಲ ಎಂದು ವೈಎಸ್‌ಆರ್‌ಪಿ  ಗೌರವಾಧ್ಯಕ್ಷೆ ವೈ. ಎಸ್.ವಿಜಯಮ್ಮ ಹೇಳಿದ್ದು, ಈ ಸಂಬಂಧ ಪತ್ರವನ್ನು ನೀಡಿದ್ದು, ಅದನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗದಿಂದ ಅಧಿಕೃತ ಸಮ್ಮತಿ ಲಭಿಸಿದ ನಂತರ ಪಕ್ಷದ ಬಗ್ಗೆ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುವುದು ಎಂದು ರಾಜಗೋಪಾಲ್ ಹೇಳಿದ್ದಾರೆ.

ನೋಂದಣಿ ಪ್ರಕ್ರಿಯೆ ಭಾಗವಾಗಿ ಪಕ್ಷದ ಹೆಸರಿನ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಏಪ್ರಿಲ್ 30 ರಂದು ಪ್ರಕಟಿಸಿತ್ತು. ಆದರೆ, ಯಾವುದೇ ಆಕ್ಷೇಪ ವ್ಯಕ್ತವಾಗದ ಕಾರಣ ಒಪ್ಪಿಗೆ ಪ್ರಕ್ರಿಯೆ ಪೂರ್ಣಗೊಂಡಿದೆ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com