ಅಪಾಯಕಾರಿ ಚಾಲನೆ: ರಾಬರ್ಟ್ ವಾದ್ರಾ ಕಾರಿಗೆ ದಂಡ ಹಾಕಿದ ಪೊಲೀಸರು!

ದೆಹಲಿಯ ಸುಖ್ ದೇವ್ ವಿಹಾರ್ ಪ್ರದೇಶದಲ್ಲಿರುವ ತಮ್ಮ ಕಚೇರಿಗೆ ಭದ್ರತಾ ಸಿಬ್ಬಂದಿ ಜೊತೆಗೆ ಹೋಗುತ್ತಿದ್ದ ವೇಳೆ ಅಪಾಯಕಾರಿಯಾಗಿ ನಿರ್ಲಕ್ಷ್ಯ ಚಾಲನೆ ಮಾಡಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ಅವರ ವಾಹನಕ್ಕೆ ಪೊಲೀಸರು ದಂಡ ಹಾಕಿದ್ದಾರೆ.
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
Updated on: 

ನವದೆಹಲಿ: ದೆಹಲಿಯ ಸುಖ್ ದೇವ್ ವಿಹಾರ್ ಪ್ರದೇಶದಲ್ಲಿರುವ ತಮ್ಮ ಕಚೇರಿಗೆ ಭದ್ರತಾ ಸಿಬ್ಬಂದಿ ಜೊತೆಗೆ ಹೋಗುತ್ತಿದ್ದ ವೇಳೆ ಅಪಾಯಕಾರಿಯಾಗಿ ನಿರ್ಲಕ್ಷ್ಯ ಚಾಲನೆ ಮಾಡಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ಅವರ ವಾಹನಕ್ಕೆ ಪೊಲೀಸರು ದಂಡ ಹಾಕಿದ್ದಾರೆ.

ಮೋಟಾರು ವಾಹನ ಕಾಯ್ದೆಯ ಭಾರತೀಯ ದಂಡ ಸಂಹಿತೆ 184ರಡಿಯಲ್ಲಿ (ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ) ನಿನ್ನೆ ಪೊಲೀಸರು ದಂಡ ವಿಧಿಸಲಾಗಿದೆ. ರಾಬರ್ಟ್ ವಾದ್ರಾ ಅವರ ಭದ್ರತಾ ಸಿಬ್ಬಂದಿ ವಾಹನ ಹಿಂದೆಯೇ ಅವರ ವಾಹನ ಜೊತೆಗೆ ಸಾಗುತ್ತಿತ್ತು.

ನಿನ್ನೆ ಬೆಳಗ್ಗೆ ರಾಬರ್ಟ್ ವಾದ್ರಾ ಅವರು ಕಚೇರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅವರ ಕಾರನ್ನು ಚಾಲಕ ಚಲಾಯಿಸುತ್ತಿದ್ದ. ಬರಾಪುಲ್ಲಾ ಫ್ಲೈಓವರ್ ಬಳಿ ವಾಹನದ ಚಾಲಕ ಬ್ರೇಕ್ ಹಾಕಿದಾಗ ಹಿಂದಿನಿಂದ ಬಂದ ಭದ್ರತಾ ಸಿಬ್ಬಂದಿ ವಾಹನ ಡಿಕ್ಕಿ ಹೊಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com