ಜಮ್ಮುವಿನ ಭಾರತೀಯ ವಾಯುಪಡೆಯ ನೆಲೆಯಲ್ಲಿ ಸಂಭವಿಸಿದ ಅವಳಿ ಸ್ಫೋಟ ಭಯೋತ್ಪಾದಕ ದಾಳಿ: ದಿಲ್ಬಾಗ್ ಸಿಂಗ್

ಜಮ್ಮು ವಿಮಾನ ನಿಲ್ದಾಣದ ಹೈ ಸೆಕ್ಯುರಿಟಿ ಭಾರತೀಯ ವಾಯುಪಡೆಯ ನಿಲ್ದಾಣದಲ್ಲಿ ಸಂಭವಿಸಿದ ಅವಳಿ ಸ್ಫೋಟ ಭಯೋತ್ಪಾದಕ ದಾಳಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ದಿಲ್ಬಾಗ್ ಸಿಂಗ್
ದಿಲ್ಬಾಗ್ ಸಿಂಗ್

ನವದೆಹಲಿ: ಜಮ್ಮು ವಿಮಾನ ನಿಲ್ದಾಣದ ಹೈ ಸೆಕ್ಯುರಿಟಿ ಭಾರತೀಯ ವಾಯುಪಡೆಯ ನಿಲ್ದಾಣದಲ್ಲಿ ಸಂಭವಿಸಿದ ಅವಳಿ ಸ್ಫೋಟ ಭಯೋತ್ಪಾದಕ ದಾಳಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಪೊಲೀಸರು, ಐಎಎಫ್ ಮತ್ತು ಇತರ ಏಜೆನ್ಸಿಗಳು ದಾಳಿಯ ಬಗ್ಗೆ ತನಿಖೆ ನಡೆಸುತ್ತಿವೆ. ಮುಂಜಾನೆ 1.40ರ ಸುಮಾರಿಗೆ ಎರಡು ಸ್ಫೋಟಕಗಳು ತುಂಬಿದ ಡ್ರೋನ್‌ಗಳು ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಐಎಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಆರು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳು ನಡೆದಿವೆ. ಮೊದಲ ಸ್ಫೋಟ ನಗರದ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಮೊದಲ ಅಂತಸ್ತಿನ ಕಟ್ಟಡದ ಮೇಲೆ ಬಿದ್ದು ಛಾವಣಿ ಧ್ವಂಸಗೊಂಡಿದೆ. ಎರಡನೆಯದು ನೆಲದ ಮೇಲೆ ಬಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಯುಪಡೆಯ ಉಪ ಏರ್ ಚೀಫ್, ಏರ್ ಮಾರ್ಷಲ್ ಹೆಚ್ ಎಸ್ ಅರೋರ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com