ಐಐಟಿ ಜೋಧಪುರದಲ್ಲಿ ಮತ್ತೆ 29 ಮಂದಿಗೆ ಪಾಸಿಟಿವ್, ಕ್ಯಾಂಪಸ್‌ನ ಸೋಂಕಿತರ ಸಂಖ್ಯೆ 225ಕ್ಕೆ ಏರಿಕೆ

ಐಐಟಿ ಜೋಧ್‌ಪುರದ 25 ವಿದ್ಯಾರ್ಥಿಗಳು ಸೇರಿದಂತೆ ಮತ್ತೆ 29 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕ್ಯಾಂಪಸ್‌ನಲ್ಲಿ ಸೋಂಕಿತರ ಸಂಖ್ಯೆ 225 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೋಧ್‌ಪುರ: ಐಐಟಿ ಜೋಧ್‌ಪುರದ 25 ವಿದ್ಯಾರ್ಥಿಗಳು ಸೇರಿದಂತೆ ಮತ್ತೆ 29 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕ್ಯಾಂಪಸ್‌ನಲ್ಲಿ ಸೋಂಕಿತರ ಸಂಖ್ಯೆ 225 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕ್ಯಾಂಪಸ್ ನ ಪ್ರತಿ ನಿವಾಸಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಬೃಹತ್ ಅಭಿಯಾನ ಆರಂಭಿಸಿದ ನಂತರ ಸಂಸ್ಥೆಯಲ್ಲಿ 29 ಹೊಸಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಸಂಸ್ಥೆಯ ವಕ್ತಾರ ಮತ್ತು ಉಪ ನೋಂದಣಾಧಿಕಾರಿ ಅಮರದೀಪ್ ಶರ್ಮಾ ಹೇಳಿದ್ದಾರೆ.

"ಮೇ 7 ರಂದು ಈ 25 ವಿದ್ಯಾರ್ಥಿಗಳು ಮತ್ತು ನಾಲ್ವರು ಸಿಬ್ಬಂದಿಯ ಸ್ವ್ಯಾಬ್ ಮಾದರಿ ಸಂಗ್ರಹಿಸಲಾಗಿತ್ತು. ಅವರ ವರದಿ ಪಾಸಿಟಿವ್ ಬಂದಿದೆ" ಎಂದು ಅವರು ಹೇಳಿದರು.

ತ್ರೈಮಾಸಿಕದ ಕೊನೆಯ ಸೆಮಿಸ್ಟರ್ ಮೇ 7 ರಂದು ಕೊನೆಗೊಂಡಿದ್ದು, ಕೋರ್ಸ್‌ಗಳು ಪೂರ್ಣಗೊಂಡಿರುವುದರಿಂದ ಈಗ ಆನ್‌ಲೈನ್‌ನಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com