ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಮೇ 17 ರಿಂದ 23ರವರೆಗಿನ ಬಳಕೆಗಾಗಿ
23 ಲಕ್ಷ ರೆಮಿಡಿಸಿವಿರ್ ಇಂಜೆಕ್ಷನ್ ಹಂಚಿಕೆ ಮಾಡಿರುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸದಾನಂದಗೌಡ, ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ರೆಮಿಡಿಸಿವಿರ್ ಇಂಜೆಕ್ಷನ್ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 21ರಿಂದ ಇದುವರೆಗೆ ಒಟ್ಟಾರೇ 76 ಲಕ್ಷ ವಯಲ್ಸ್ ರೆಮಿಡಿಸಿವಿರ್ ಇಂಜೆಕ್ಷನ್ ಹಂಚಿಕೆ ಮಾಡಲಾಗಿದೆ. ಇದರಲ್ಲಿ ರಾಜ್ಯದ ಪಾಲು 10 ಲಕ್ಷವಾಗಿದೆ ಎಂದು ಸದಾನಂದಗೌಡ ವಿವರ ನೀಡಿದ್ದಾರೆ.
Advertisement