ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ಗೆ ಪ್ರತಿಷ್ಠಿತ ಇಎನ್ ಐ ಅಂತಾರಾಷ್ಟ್ರೀಯ ಪ್ರಶಸ್ತಿ!

ಭಾರತ ರತ್ನ ಪುರಸ್ಕೃತ ವಿಜ್ಞಾನಿ, ಪ್ರಾಧ್ಯಾಪಕ ಸಿ.ಎನ್.ಆರ್ ರಾವ್  ಪ್ರತಿಷ್ಠಿತ ಅಂತಾರಾಷ್ಟ್ರೀಯ ಇಎನ್ ಐ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
ಪ್ರೊಫೆಸರ್ ಸಿಎನ್ ಆರ್ ರಾವ್
ಪ್ರೊಫೆಸರ್ ಸಿಎನ್ ಆರ್ ರಾವ್
Updated on

ಬೆಂಗಳೂರು: ಭಾರತ ರತ್ನ ಪುರಸ್ಕೃತ ವಿಜ್ಞಾನಿ, ಪ್ರಾಧ್ಯಾಪಕ ಸಿ.ಎನ್.ಆರ್ ರಾವ್  ಪ್ರತಿಷ್ಠಿತ ಅಂತಾರಾಷ್ಟ್ರೀಯ ಇಎನ್ ಐ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಗುರುವಾರ ತಿಳಿಸಿದೆ.

 ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಸಂಗ್ರಹಣೆಯ ಸಂಶೋಧನೆಗಾಗಿ ಈ ಪ್ರಶಸ್ತಿ ಸಂದಿದೆ. ಇದನ್ನು ಎನರ್ಜಿ ಫ್ರಾಂಟಿಯರ್ ಪ್ರಶಸ್ತಿ ಎಂದು  ಕರೆಯಲಾಗುತ್ತದೆ. ಶಕ್ತಿ ಸಂಶೋಧನೆಯಲ್ಲಿ ನೊಬೆಲ್ ಪ್ರಶಸ್ತಿ ಎಂದು ಗುರುತಿಸಲಾಗಿದೆ.

ಪ್ರೊಫೆಸರ್ ರಾವ್ ಶಕ್ತಿಯ ಮೂಲವಾಗಿ ಹೈಡ್ರೋಜನ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೈಡ್ರೋಜನ್ ಸಂಗ್ರಹಣೆ, ಹೈಡ್ರೋಜನ್ ನ ದ್ಯುತಿ ರಾಸಾಯನಿಕ ಮತ್ತು ಎಲೆಕ್ಟ್ರೋಕೆಮಿಕಲ್ ಉತ್ಪಾದನೆ, ಹೈಡ್ರೋಜನ್ ನ ಸೌರ ಉತ್ಪಾದನೆ ಮತ್ತು ಲೋಹವಲ್ಲದ ವೇಗವರ್ಧನೆ ಅವರ ಕೆಲಸದ ಪ್ರಮುಖ ಅಂಶಗಳಾಗಿವೆ. 

ರೋಮ್ ನಲ್ಲಿ ಅಕ್ಟೋಬರ್ 14 ರಂದು ನಡೆಯಲಿರುವ ಸಮಾರಂಭದಲ್ಲಿ ಅಧಿಕೃತವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com