ನವದೆಹಲಿ: ಹಿರಿಯ ಪತ್ರಕರ್ತ ವಿನೋದ್ ದುವಾ ನಿಧನ

ಅನಾರೋಗ್ಯದಿಂದ ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಪತ್ರಕರ್ತ ವಿನೋದ್ ದುವಾ ಶನಿವಾರ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. 
ವಿನೋದ್ ದುವಾ
ವಿನೋದ್ ದುವಾ

ನವದೆಹಲಿ: ಅನಾರೋಗ್ಯದಿಂದ ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಪತ್ರಕರ್ತ ವಿನೋದ್ ದುವಾ ಶನಿವಾರ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. 

ಖ್ಯಾತ ಪತ್ರಕರ್ತರಾಗಿದ್ದ ವಿನೋದ್ ದುವಾ ಅವರಿಗೆ ಇದೇ ವರ್ಷದ ಆರಂಭದಲ್ಲಿ ಕೋವಿಡ್-19 ಸೋಂಕಿನಿಂದ  ಆಸ್ಪತ್ರೆಗೆ ದಾಖಲಾಗಿದ್ದರು. ರೇಡಿಯಾಲಜಿಸ್ಟ್ ಆಗಿದ್ದ ಅವರ ಪತ್ನಿ  ಪದ್ಮಾವತಿ ಕೂಡಾ ಕೊರೋನಾದಿಂದ ಜೂನ್ ನಲ್ಲಿ ನಿಧನರಾಗಿದ್ದರು.

ನವದೆಹಲಿಯ ಲೋಧಿ ಸ್ಮಶಾನದಲ್ಲಿ ಭಾನುವಾರ ವಿನೋದ್ ದುವಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರಿ ಮಲ್ಲಿಕಾ ದುವಾ ತಿಳಿಸಿದ್ದಾರೆ.

ನಮ್ಮ ನಿರ್ಭೀತ, ಅಸಾಧಾರಣ ತಂದೆ, ವಿನೋದ್ ದುವಾ ನಿಧನ ಹೊಂದಿರುವುದಾಗಿ  ಮಲ್ಲಿಕಾ ದುವಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  ವಿನೋದ್ ದುವಾ ದೂರದರ್ಶನ ಹಾಗೂ ಎನ್ ಡಿಟಿವಿಯಲ್ಲಿ ಕಾರ್ಯನಿರ್ವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com