ನವ ವಿವಾಹಿತೆಯ ಹುಚ್ಚು ಸಾಹಸ: ಬಂದೂಕಿನ ಜೊತೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಗುಂಡು ಸಿಡಿದು ಸಾವು!

ಬಂದೂಕಿನ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸದಲ್ಲಿ ಗುಂಡು ಹಾರಿ 26 ವರ್ಷದ ನವವಾಹಿತೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
ರಾಧಿಕಾ ಗುಪ್ತಾ
ರಾಧಿಕಾ ಗುಪ್ತಾ

ಲಕ್ನೋ: ಬಂದೂಕಿನ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸದಲ್ಲಿ ಗುಂಡು ಹಾರಿ 26 ವರ್ಷದ ನವವಾಹಿತೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ. 

ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನೊಂದಿಗೆ ಮಹಿಳೆ ಗುರುವಾರ ಸಂಜೆ ಸೆಲ್ಫಿ ಕ್ಲಿಕ್ಕಿಸುವಾಗ ಈ ದುರಂತ ನಡೆದಿದೆ. ಸೆಲ್ಫಿಗೆ ಪೋಸ್ ನೀಡುವಾಗ ಬಂದೂಕಿನಲ್ಲಿ ಗುಂಡುಗಳು ತುಂಬಿರುವುದು ರಾಧಿಕಾ ಗುಪ್ತಾ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವರು ನಳಿಕೆಯನ್ನು ಎಳೆದಿದ್ದರು. ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

2021ರ ಮೇ ತಿಂಗಳಲ್ಲಿ, ಅಂದರೆ ಕೇವಲ ಎರಡು ತಿಂಗಳ ಹಿಂದಷ್ಟೇ ರಾಧಿಕಾ, ತಮ್ಮ ಮಗ ಆಕಾಶ್ ಗುಪ್ತಾ ಜತೆ ಮದುವೆಯಾಗಿದ್ದರು ಎಂದು ಮಹಿಳೆಯ ಮಾವ ರಾಜೇಶ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ. ಮದುವೆಯಲ್ಲಿ ವರದಕ್ಷಿಣೆ ಎಂದು 2 ಲಕ್ಷ ರು ಹಣ ನೀಡಲಾಗಿತ್ತು, ಆದರೆ ಇದರಲ್ಲಿ ಏನೋ ಸಂಚು ನಡೆದಿದೆ ಎಂದು ಆರೋಪಿಸಿರುವ ಮಹಿಳೆಯ ತಂದೆ,
ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಬಂದೂಕು ಮತ್ತು ಮೊಬೈಲ್ ಫೋನ್ ಅನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆ ಫೋನ್‌ನಲ್ಲಿ ಗುಂಡು ಹಾರುವ ಕೆಲವೇ ಸೆಕೆಂಡುಗಳ ಮೊದಲು ತೆಗೆದುಕೊಂಡಿದ್ದ ಸೆಲ್ಫಿ ದೊರಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com