ಆಧಾರ್-ಪ್ಯಾನ್ ಜೋಡಣೆಗೆ ಮಾರ್ಚ್ ವರೆಗೂ ಗಡುವು; ನಿಷ್ಕ್ರಿಯ ಪ್ಯಾನ್ ನಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಇಲ್ಲಿದೆ...

ಆಧಾರ್ ಜೊತೆ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳು ಮಾರ್ಚ್ 2023 ರಿಂದ ನಿಷ್ಕ್ರಿಯಗೊಳ್ಳಲಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 
ಆಧಾರ್- ಪ್ಯಾನ್ ಕಾರ್ಡ್ ಚಿತ್ರ
ಆಧಾರ್- ಪ್ಯಾನ್ ಕಾರ್ಡ್ ಚಿತ್ರ

ನವದೆಹಲಿ: ಆಧಾರ್ ಜೊತೆ ಜೋಡಣೆಯಾಗದ ಪ್ಯಾನ್ ಕಾರ್ಡ್ ಗಳು ಮಾರ್ಚ್ 2023 ರಿಂದ ನಿಷ್ಕ್ರಿಯಗೊಳ್ಳಲಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 

ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. ಆದ್ದರಿಂದ ಇಂದೇ ಜೋಡಣೆ ಮಾಡಿ ಎಂದು ಸಾರ್ವಜನಿಕ ಸಲಹೆಯನ್ನು ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ. 

ವಿನಾಯಿತಿ ವರ್ಗವನ್ನು ಹೊರತುಪಡಿಸಿ, ಎಲ್ಲಾ ಪ್ಯಾನ್ ಕಾರ್ಡ್ ಹೋಲ್ಡರ್ ಗಳು 31.03,2023 ರ ವೇಳೆಗೆ ಪ್ಯಾನ್ ಕಾರ್ಡ್ ನ್ನು ಆಧಾರ್ ಗೆ ಜೋಡಣೆ ಮಾಡುವುದು ಅಗತ್ಯವಾಗಿದೆ ಇಲ್ಲದೇ ಇದ್ದಲ್ಲಿ ಪ್ಯಾನ್ ನಿಷ್ಕ್ರಿಯಗೊಳಿಸುತ್ತದೆ ಎಂದು ಇಲಾಖೆ ತಿಳಿಸಿದೆ.

2017 ರಲ್ಲಿ ಸರ್ಕಾರದ ಅಧಿಸೂಚನೆಯ ಪ್ರಕಾರ, ಅಸ್ಸಾಂ, ಜಮ್ಮು-ಕಾಶ್ಮೀರ, ಮೇಘಾಲಯದ ಮಂದಿ ವಿನಾಯಿತಿ ವಿಭಾಗದಲ್ಲಿ ಬರುತ್ತಾರೆ, ಹಾಗೂ 80 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ವಿನಾಯ್ತಿ ನೀಡಲಾಗುತ್ತದೆ.

ಪ್ಯಾನ್ ನಿಷ್ಕ್ರಿಯಗೊಂಡಲ್ಲಿ, ಆ ನಿರ್ದಿಷ್ಟ ವ್ಯಕ್ತಿ ಐಟಿ ಕಾಯ್ದೆಯ ಅಡಿ ಎದುರಾಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ನಿಷ್ಕ್ರಿಯಗೊಂಡಿರುವ ಪ್ಯಾನ್ ನ್ನು ಇಟ್ಟುಕೊಂಡು ಐಟಿ ರಿಟರ್ನ್ಸ್ ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನಿಷ್ಕ್ರಿಯಗೊಂಡ ಪ್ಯಾನ್ ಗೆ ಬಾಕಿ ರೀಫಂಡ್ ನೀಡಲು ಬರುವುದಿಲ್ಲ. ಹಾಗೂ ತೆರಿಗೆ ಮೊತ್ತವನ್ನು ಹೆಚ್ಚಾಗಿ ಕಡಿತಗೊಳಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com