ಚಿಕ್ಕಪ್ಪ ಶರದ್ ಪವಾರ್ ಜೊತೆಗೆ ಸಭೆ, ಮಹಾ ಡಿಸಿಎಂ ಅಜಿತ್ ಪವಾರ್ ಹೇಳಿದ್ದು ಹೀಗೆ...

ಶನಿವಾರ ಪುಣೆಯಲ್ಲಿ ಎನ್ ಸಿಪಿ ಮುಖ್ಯಸ್ಥ ಹಾಗೂ ಸಂಬಂಧಿ ಶರದ್ ಪವಾರ್ ಜೊತೆಗಿನ ಸಭೆಯಲ್ಲಿ ಏನಾಯಿತು ಎಂಬುದುರ ಬಗ್ಗೆ ಅಜಿತ್ ಪವಾರ್ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದರು.
ಮಹಾ ಡಿಸಿಎಂ ಅಜಿತ್ ಪವಾರ್
ಮಹಾ ಡಿಸಿಎಂ ಅಜಿತ್ ಪವಾರ್
Updated on: 

ಕೊಲ್ಹಾಪುರ: ಶನಿವಾರ ಪುಣೆಯಲ್ಲಿ ಎನ್ ಸಿಪಿ ಮುಖ್ಯಸ್ಥ ಹಾಗೂ ಸಂಬಂಧಿ ಶರದ್ ಪವಾರ್ ಜೊತೆಗಿನ ಸಭೆಯಲ್ಲಿ ಏನಾಯಿತು ಎಂಬುದುರ ಬಗ್ಗೆ ಅಜಿತ್ ಪವಾರ್ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದರು.

ಸಭೆಯ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಪವಾರ್ ಸಾಹೇಬ್  ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕುಟುಂಬ ಸದಸ್ಯರ ನಡುವೆ ನಡೆದ ಸಭೆಗೆ ಮಾಧ್ಯಮಗಳು ವಿವಿಧ ರೀತಿಯ ಪ್ರಚಾರ ನೀಡುತ್ತಿವೆ. ಇದು ಗೊಂದಲಕ್ಕೆ ಕಾರಣವಾಗುತ್ತಿದೆ. ಸಭೆಯಲ್ಲಿ ಏನೋ ನಡೆದಿದೆ ಎಂದು ಭಾವಿಸುವಂತಿಲ್ಲ ಎಂದರು. 

ಶನಿವಾರ, ಪುಣೆಯ ಉದ್ಯಮಿಯೊಬ್ಬರ ನಿವಾಸದಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ 'ರಹಸ್ಯ' ಸಭೆ ನಡೆದ ನಂತರ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಎನ್‌ಸಿಪಿಯ ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ಆ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರಿನಲ್ಲಿ ಅಡಗಿಕೊಂಡು ಹೊರಟಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಜಿತ್ ಪವಾರ್, ನಾನು ಕಾರಿನಲ್ಲಿ ಇರಲಿಲ್ಲ ಎಂದು ಹೇಳಿದರು. 

ನಾನು ಬಹಿರಂಗವಾಗಿ ತಿರುಗಾಡುವವನು, ಗುಟ್ಟಾಗಿ ಹೊರಡಲಿಲ್ಲ. ಮರೆ ಮಾಚಲು ಯಾವುದೇ ಕಾರಣವಿಲ್ಲ ,ಆ ಕಾರಿನಲ್ಲಿ ನಾನು ಇರಲಿಲ್ಲ ಎಂದರು. ಆಗಸ್ಟ್ 12 ರಂದು ಶರದ್ ಪವಾರ್ ಹಾಗೂ ಅಜಿತ್ ಪವಾರ್ ಅವರು ಉದ್ಯಮಿ ಅತುಲ್ ಚೋರ್ಡಿಯಾ ಅವರ ನಿವಾಸದಲ್ಲಿ ಭೇಟಿಯಾಗಿರುವುದಾಗಿ ವರದಿಯಾಗಿತ್ತು. 

ಈ ವರ್ಷದ ಜುಲೈನಲ್ಲಿ ಎನ್‌ಸಿಪಿಯನ್ನು ವಿಭಜಿಸಿ  ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಗೊಂಡ ನಂತರ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದನ್ನು ಒಪ್ಪಿಕೊಂಡ ಅಜಿತ್ ಪವಾರ್, ಎರಡು ತಲೆಮಾರುಗಳಿಂದ ಉದ್ಯಮಿ ಅತುಲ್ ಚೋರ್ಡಿಯಾ ಅವರೊಂದಿಗೆ ಒಡನಾಟವನ್ನು ಹೊಂದಿದೆ ಎಂದು ಅವರು ಹೇಳಿದರು.

ಚೋರ್ಡಿಯಾ ಅವರು ಪವಾರ್ ಸಾಹೇಬರನ್ನು ಊಟಕ್ಕೆ ಕರೆದಿದ್ದರು. ಅವರು ವಸಂತದಾದಾ ಶುಗರ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯಕ್ರಮ ಮುಗಿಸಿ ಅಲ್ಲಿಗೆ ಹೋಗಬೇಕಿತ್ತು ಮತ್ತು ಜಯಂತ್ ಪಾಟೀಲ್ ಅವರ ಜೊತೆಯಲ್ಲಿದ್ದ ಕಾರಣ ಅವರೂ ಹೋಗಿದ್ದರು. ಚಾಂದಿನಿ ಚೌಕ್ ಸೇತುವೆ ಉದ್ಘಾಟನೆ ಮುಗಿಸಿ ನಾನು ಅಲ್ಲಿಗೆ ತಲುಪಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com