ಕೋವಿಡ್ ರೂಪಾಂತರಿ ಜೆಎನ್​.1: ದೇಶದ 6 ರಾಜ್ಯಗಳಲ್ಲಿ 63 ಪ್ರಕರಣ ಪತ್ತೆ; ನಂ.1 ಸ್ಥಾನದಲ್ಲಿ ಗೋವಾ!

ಮಹಾಮಾರಿ ಕೊರೋನಾ ವೈರಸ್​ನ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ 63ಕ್ಕೆ ಏರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹಾಮಾರಿ ಕೊರೋನಾ ವೈರಸ್​ನ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ 63ಕ್ಕೆ ಏರಿದೆ.

ದೇಶದ ಒಟ್ಟು 6 ರಾಜ್ಯಗಳಲ್ಲಿ (ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ)ರೂಪಾಂತರಿ ವೈರಸ್ JN.1 ಪತ್ತೆಯಾಗಿದ್ದು, ಈ ಪೈಕಿ ಗೋವಾದಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಜೆಎನ್‌.1 ವೈರಸ್ ಗೋವಾದಲ್ಲಿ ಇದುವರೆಗೆ 34 ಪ್ರಕರಣಗಳ ಪತ್ತೆಯಾಗಿದ್ದರೆ, ಮಹಾರಾಷ್ಟ್ರ 9, ಕರ್ನಾಟಕ 8, ಕೇರಳ 6, ತಮಿಳುನಾಡು 4 ಮತ್ತು ತೆಲಂಗಾಣದಲ್ಲಿ 2 ಕೇಸ್ ಗಳು ಪತ್ತೆಯಾಗಿವೆ.

ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಪ್ರಕರಣಗಳಲ್ಲೂ ಕ್ಲಸ್ಟರ್ ಮಾದರಿ ವರದಿಯಾಗಿಲ್ಲ. ಸೋಂಕಿತರೆಲ್ಲರಲ್ಲೂ ಸೌಮ್ಯ ಲಕ್ಷಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ದೇಶದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,054ಕ್ಕೆ ತಲುಪಿದ್ದು, ಕೇರಳದಿಂದ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಮಾಹಿತಿ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com