ದೆಹಲಿ: ಹಳಿ ಮೇಲೆ ವಿಡಿಯೋ ಶೂಟಿಂಗ್ ಮಾಡುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಸಾವು

ರಾಷ್ಟ್ರ ರಾಜಧಾನಿ ದೆಹಲಿಯ ಕಾಂತಿ ನಗರ ಮೇಲ್ಸೇತುವೆ ಬಳಿಯ ರೈಲ್ವೆ ಹಳಿಗಳಲ್ಲಿ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕಾಂತಿ ನಗರ ಮೇಲ್ಸೇತುವೆ ಬಳಿಯ ರೈಲ್ವೆ ಹಳಿಗಳಲ್ಲಿ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿ ವಂಶ್ ಶರ್ಮಾ (23) ಮತ್ತು ಸೇಲ್ಸ್‌ಮ್ಯಾನ್ ಮೋನು (20) ಎಂದು ಗುರುತಿಸಲಾಗಿದೆ. ಇಬ್ಬರೂ ಕಾಂತಿ ನಗರದ ನಿವಾಸಿಗಳಾಗಿದ್ದಾರೆ. ಯುವಕರು ಮೊಬೈಲ್‌ನಲ್ಲಿ ಕಿರುಚಿತ್ರಗಳನ್ನು ಚಿತ್ರೀಕರಿಸುತ್ತಿದ್ದು, ಆಗಾಗ ಲೈವ್ ವಿಡಿಯೊಗಳನ್ನು ಮಾಡಲು ರೈಲ್ವೆ ಹಳಿಗಳ ಬಳಿ ಬರುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಘಟನೆ ನಡೆದ ಸಂದರ್ಭದಲ್ಲಿ ಅವರ ಮೊಬೈಲ್‌ಗಳು ರೈಲ್ವೆ ಟ್ರ್ಯಾಕ್‌ನಲ್ಲಿ ಪತ್ತೆಯಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಫೆಬ್ರವರಿ 22 ರಂದು ಈ ಘಟನೆ ನಡೆದಿದ್ದು, ಹಳೆ ದೆಹಲಿ ರೈಲ್ವೆ ನಿಲ್ದಾಣದ ಶಹದಾರ ಪೊಲೀಸ್ ಠಾಣೆಗೆ ಸಂಜೆ 4.35 ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.. ರೈಲ್ವೆ ಹಳಿ ಮೇಲೆ ಅವರ ಮೊಬೈಲ್ ಕೂಡ ಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com