ಮಣಿಪುರ: ಮಹಿಳೆ ಹತ್ಯೆಗೆ ಸಂಬಂಧಿಸಿದಂತೆ 9 ಮಂದಿ ಬಂಧನ, ನಾಗಾ ಪ್ರದೇಶಗಳಲ್ಲಿ 12 ಗಂಟೆಗಳ ಕಾಲ ಬಂದ್

ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on: 

ಇಂಫಾಲ: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಶನಿವಾರ ಸಂಜೆ ಸಾವೊಂಬಂಗ್ ಪ್ರದೇಶದಲ್ಲಿ 50 ವರ್ಷ ವಯಸ್ಸಿನ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂದು ಅವರು ಹೇಳಿದರು.

ಕೊಲೆ ಆರೋಪಿಗಳ ಪೈಕಿ ಐವರು ಮಹಿಳೆಯರು ಸೇರಿದ್ದು, ಅವರಿಂದ ಎರಡು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧೀಕ್ಷಕ (ಇಂಫಾಲ್ ಪೂರ್ವ) ಕ್ಷ ಶಿವಕಾಂತ ಸಿಂಗ್, ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಮತ್ತು ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಂಧಿಸಲಾಗುವುದು ಎಂದು ಹೇಳಿದರು.

ಮೃತ ಮಹಿಳೆ ಮಾರಿಂಗ್ ನಾಗಾ ಸಮುದಾಯಕ್ಕೆ ಸೇರಿದವರು. 

ಹೈಕಕ್ಮಾಪಾಲ್ ಗ್ರಾಮಾಭಿವೃದ್ಧಿ ಸಮಿತಿಯು, ಮೂವರು ಆರೋಪಿಗಳನ್ನು ಈ ಪ್ರದೇಶದಿಂದ ಬಹಿಷ್ಕರಿಸುವುದಾಗಿ ಹೇಳಿದೆ.

ಈಮಧ್ಯೆ, ರಾಜ್ಯದಲ್ಲಿ ನಾಗಾ ಜನರು ವಾಸಿಸುವ ಪ್ರದೇಶಗಳಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಮುಂದಿನ 12 ಗಂಟೆಗಳ ಬಂದ್ ಪ್ರಾರಂಭವಾಯಿತು. ಹತ್ಯೆಯನ್ನು ಖಂಡಿಸಿ ಮಣಿಪುರದಲ್ಲಿ ನಾಗಾಗಳ ಅತ್ಯುನ್ನತ ಸಂಸ್ಥೆಯಾದ ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್‌ಸಿ) ಬಂದ್‌ಗೆ ಕರೆ ನೀಡಿದೆ.

ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳು ಪ್ರಾರಂಭವಾದಾಗಿನಿಂದ 150 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು ಮತ್ತು ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com