ಸಾಂದರ್ಭಿಕ ಚಿತ್ರ
ದೇಶ
ಪಂಜಾಬ್: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ, ಗುರುದ್ವಾರದ ಮುಖ್ಯಸ್ಥ ಬಂಧನ
13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಂಜಾಬ್‌ನ ಹೋಶಿಯಾರ್‌ಪುರದ ಗ್ರಾಮದಲ್ಲಿರುವ ಗುರುದ್ವಾರದ ಮುಖ್ಯಸ್ಥನನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಶಿಯಾರ್ ಪುರ: 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಂಜಾಬ್‌ನ ಹೋಶಿಯಾರ್‌ಪುರದ ಗ್ರಾಮದಲ್ಲಿರುವ ಗುರುದ್ವಾರದ ಮುಖ್ಯಸ್ಥನನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 20 ರಂದು ಬಾಲಕಿ ಹೋಶಿಯಾರ್‌ಪುರದ ಚಬ್ಬೇವಾಲ್ ಪ್ರದೇಶದ ತನ್ನ ಹಳ್ಳಿಯಲ್ಲಿರುವ ಗುರುದ್ವಾರಕ್ಕೆ ಹೋದಾಗ ಈ ಘಟನೆ ನಡೆದಿತ್ತು ಎಂದು ಗಢಶಂಕರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಲ್ಕರ್ ಸಿಂಗ್ ಹೇಳಿದ್ದಾರೆ.
ಗುರುದ್ವಾರ ಮುಖ್ಯಸ್ಥ ಸಕತಾರ್ ಸಿಂಗ್ (65) ಬಾಲಕಿಯನ್ನು ತನ್ನ ಕೋಣೆಗೆ ಕರೆಸಿಕೊಂಡು,ಲೈಂಗಿಕ ಕಿರುಕುಳ ನೀಡಿದ್ದ. ಘಟನೆಯನ್ನು ಬಾಲಕಿ ತನ್ನ ಪೋಷಕರಿಗೆ ವಿವರಿಸಿದ ನಂತರ ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ಡಿಎಸ್ ಪಿ ತಿಳಿಸಿದ್ದಾರೆ.
ಸಕತಾರ್ ಸಿಂಗ್ ಅವರನ್ನು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ