ವೈರಲ್ ವೀಡಿಯೋ ಪ್ರಕರಣದಲ್ಲಿದ್ದ ಇನ್ನೂ 14 ಮಂದಿಯನ್ನು ಪತ್ತೆ ಮಾಡಿದ ಮಣಿಪುರ ಪೊಲೀಸರು!

ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ್ದ ವೈರಲ್ ವೀಡಿಯೋ ಪ್ರಕರಣದಲ್ಲಿದ್ದ 14 ಮಂದಿಯನ್ನು ಮಣಿಪುರ ಪೊಲೀಸರು ಪತ್ತೆ ಮಾಡಿದ್ದಾರೆ.
ಮಣಿಪುರ ಸಂತ್ರಸ್ಥೆಯ ಪತಿ
ಮಣಿಪುರ ಸಂತ್ರಸ್ಥೆಯ ಪತಿ

ಮಣಿಪುರ: ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ್ದ ವೈರಲ್ ವೀಡಿಯೋ ಪ್ರಕರಣದಲ್ಲಿದ್ದ 14 ಮಂದಿಯನ್ನು ಮಣಿಪುರ ಪೊಲೀಸರು ಪತ್ತೆ ಮಾಡಿದ್ದಾರೆ.

14 ಮಂದಿಯ ಬಂಧನಕ್ಕೆ ಪೊಲೀಸರು ಪ್ರಕ್ರಿಯೆ ಆರಂಭಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ.04 ರಂದು ಮಣಿಪುರದಲ್ಲಿ ಮಹಿಳೆಯರನ್ನು ನಗ್ನಗೊಳಿಸಿ ಪರೇಡ್ ಮಾಡಲಾಗಿದ್ದ 26 ಸೆಕೆಂಡ್ ಗಳ ವೀಡಿಯೋ ಜು.19 ರಂದು ವೈರಲ್ ಆಗಿತ್ತು.

ಈ ಪೈಕಿ ಓರ್ವ ಮಹಿಳೆ ಅಸ್ಸಾಂ ರೆಜಿಮೆಂಟ್ ನ ಯೋಧನ ಪತ್ನಿಯಾಗಿದ್ದಾರೆ. ಘಟನೆ ಬಗ್ಗೆ ಜೂ.21 ರಂದು ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಪ್ರಕರಣ  ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com