ಇದೆಲ್ಲ ಯಾವಾಗ ಆಯಿತು? ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ವ್ಯಂಗ್ಯ!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ರಾಜೀವ್ ಗಾಂಧಿಯನ್ನು ಉಲ್ಲೇಖಿಸುವ ಬದಲು ರಾಹುಲ್ ಗಾಂಧಿ ಅವರನ್ನು ತಪ್ಪಾಗಿ ಹೆಸರಿಸಿದ್ದಾರೆ ಎಂದು ಬಿಜೆಪಿ ಸೋಮವಾರ ಲೇವಡಿ ಮಾಡಿದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ರಾಜೀವ್ ಗಾಂಧಿಯನ್ನು ಉಲ್ಲೇಖಿಸುವ ಬದಲು ರಾಹುಲ್ ಗಾಂಧಿ ಅವರನ್ನು ತಪ್ಪಾಗಿ ಹೆಸರಿಸಿದ್ದಾರೆ ಎಂದು ಬಿಜೆಪಿ ಸೋಮವಾರ ಲೇವಡಿ ಮಾಡಿದೆ.

ರಾಜಸ್ಥಾನದ ಅನೂಪ್‌ಗಢದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಅವರಂತಹ ಹಲವಾರು ನಾಯಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದರು. ಕೂಡಲೇ ವೇದಿಕೆಯಲ್ಲಿ ಇದ್ದವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಮಾದವನ್ನು ಮನವರಿಕೆ ಮಾಡಿದರು.

ಆಗ ಮಲ್ಲಿಕಾರ್ಜುನ ಖರ್ಗೆ, ಕ್ಷಮೆ ಇರಲಿ. ನಾನು ರಾಜೀವ್‌ ಗಾಂಧಿ ಎಂದು ಹೇಳುವ ಬದಲು ಬಾಯ್ತಪ್ಪಿನಿಂದಾಗಿ ರಾಹುಲ್‌ ಗಾಂಧಿ ಎಂಬುದಾಗಿ ಹೇಳಿದೆ  ಎಂದು ಸ್ಪಷ್ಟನೆ ನೀಡಿದರು. ವೇದಿಕೆಯಲ್ಲಿದ್ದ  ಜನರು ಖರ್ಗೆ ಅವರ ತಪ್ಪಿನ ಬಗ್ಗೆ ಎಚ್ಚರಿಸಿದಾಗ, ಅವರು ತಮ್ಮನ್ನು ಸರಿಪಡಿಸಿಕೊಂಡರು ಮತ್ತು ಅವರು ರಾಜೀವ್ ಗಾಂಧಿಯನ್ನು ಉದ್ದೇಶಿಸಿದ್ದಾರೆ ಎಂದು ಹೇಳಿದರು. ಅವರು ತಪ್ಪಿಗೆ ಕ್ಷಮೆಯಾಚಿಸಿದರು. ರಾಜೀವ್  ಗಾಂಧಿ ದೇಶದ ಏಕತೆಗಾಗಿ ತಮ್ಮ ಜೀವನವನ್ನು ಅರ್ಪಿಸಿದರು.

ಕಾಂಗ್ರೆಸ್‌ನ ಹಲವು ನಾಯಕರು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರೆ, ಬಿಜೆಪಿ ನಾಯಕರು ಜನರ ಪ್ರಾಣವನ್ನೇ ಬಲಿ ತೆಗೆದುಕೊಳ್ಳುತ್ತಾರೆಎಂದು ಟೀಕಿಸಿದರು. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರ ಪ್ರಮಾದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಬಿಜೆಪಿಯು, ಇದೆಲ್ಲ ಯಾವಾಗ ಆಯಿತು ಎಂದು ಟಾಂಗ್‌ ನೀಡಿದೆ. ರಾಜಸ್ಥಾನದಲ್ಲಿ ನವೆಂಬರ್‌ 25ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಕಾಂಗ್ರೆಸ್‌ ಸಾಲು ಸಾಲು ರ‍್ಯಾಲಿ, ಅಬ್ಬರದ ಪ್ರಚಾರ ಕೈಗೊಳ್ಳುತ್ತಿದೆ. ಬಿಜೆಪಿಯೂ ಪ್ರಚಾರದಲ್ಲಿ ನಿರತವಾಗಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಕಾಂಗ್ರೆಸ್ ಪಕ್ಷದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಾಯಕರಿದ್ದಾರೆ, ಮತ್ತೊಂದೆಡೆ ಬಿಜೆಪಿಯಲ್ಲಿ ತಮ್ಮ ಪ್ರಾಣವನ್ನು ತೆಗೆದುಕೊಳ್ಳುವ ನಾಯಕರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ತಪ್ಪನ್ನು ಟೀಕಿಸಿರುವ ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್ನಲ್ಲಿ ಖರ್ಗೆ ಅವರ ಭಾಷಣದ ವೀಡಿಯೊ ತುಣುಕನ್ನು ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com