ಅಸ್ಸಾಂ: ತಿನ್ಸುಕಿಯಾದಲ್ಲಿ ಸೇನಾ ಕ್ಯಾಂಪ್ ಹೊರಗೆ ಗ್ರೆನೇಡ್​ ಸ್ಫೋಟ

ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಸೇನಾ ಶಿಬಿರದ ಹೊರಗೆ ಗ್ರೆನೇಡ್ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿನ್ಸುಕಿಯಾ: ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಸೇನಾ ಶಿಬಿರದ ಹೊರಗೆ ಗ್ರೆನೇಡ್ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆ ಡಿರಾಕ್‌ನಲ್ಲಿರುವ ಸೇನಾ ಶಿಬಿರದ ಗೇಟ್‌ಗಳ ಮುಂದೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಅಪರಾಧಿಗಳನ್ನು ಹಿಡಿಯಲು ಹುಡುಕಾಟವನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಅಕ್ಟೋಬರ್ 1 ರಿಂದ, ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯಿದೆ, 1958 (AFSPA) ಅನ್ವಯವನ್ನು ಅಸ್ಸಾಂನ 4 ಜಿಲ್ಲೆಗಳಲ್ಲಿ – ದಿಬ್ರುಗಢ್, ತಿನ್ಸುಕಿಯಾ, ಶಿವಸಾಗರ್ ಮತ್ತು ಚರೈಡಿಯೊದಲ್ಲಿ ವಿಸ್ತರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com