ಟೆಲ್ ಅವೀವ್ ಗೆ ಅ.18 ವರೆಗೆ ವಿಮಾನ ಸಂಚಾರ ಸ್ಥಗಿತಗೊಳಿಸಿದ ಏರ್ ಇಂಡಿಯಾ

ಟೆಲ್ ಅವೀವ್ ಗೆ ಅ.18 ವರೆಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. 
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ನವದೆಹಲಿ: ಟೆಲ್ ಅವೀವ್ ಗೆ ಅ.18 ವರೆಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. 

ಇಸ್ರೇಲ್ ಹಾಗೂ ಹಮಾಸ್ ಉಗ್ರ ಸಂಘಟನೆಯ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧಗ್ರಸ್ತವಾಗಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನಗಳನ್ನು ಸ್ಥಗಿತಗೊಳಿಸಿದೆ. 

ವಾರದಲ್ಲಿ ನಿಗದಿಯಾಗಿರುವ ಏರ್ ಇಂಡಿಯಾ 5 ವಿಮಾನಗಳು ಭಾರತದಿಂದ ಟೆಲ್ ಅವೀವ್ ಗೆ ಸಂಚರಿಸುತ್ತಿತ್ತು. ಕಳೆದ ವಾರ ದಾಳಿ ಆರಂಭವಾದ ಬೆನ್ನಲ್ಲೆ ಅ.14 ವರೆಗೆ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. 

ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಬರುವ ನಿಗದಿತ ವಿಮಾನಗಳನ್ನು ಈಗ ಅಕ್ಟೋಬರ್ 18 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಏರ್‌ಲೈನ್‌ನ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ. ಅವಶ್ಯಕತೆಗಳಿಗೆ ಅನುಗುಣವಾಗಿ ಭಾರತೀಯರನ್ನು ಮರಳಿ ಕರೆತರಲು ವಿಮಾನ ಸಂಸ್ಥೆ ಚಾರ್ಟರ್ಡ್ ವಿಮಾನಗಳನ್ನು ನಿರ್ವಹಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com