ನೇಪಾಳದಲ್ಲಿನ ಮೌಂಟ್ ಅನ್ನಪೂರ್ಣದಲ್ಲಿ ಭಾರತದ ಪರ್ವತಾರೋಹಿ ಬಲ್ಜಿತ್ ಕೌರ್ ನಾಪತ್ತೆ!

ಭಾರತದ ಮಹಿಳಾ ಪರ್ವತಾರೋಹಿ 27 ವರ್ಷದ ಬಲ್ಜಿತ್ ಕೌರ್, ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ 4 ರಿಂದ ನಾಪತ್ತೆಯಾಗಿದ್ದಾರೆ.
ಪರ್ವತ (ಸಾಂಕೇತಿಕ ಚಿತ್ರ)
ಪರ್ವತ (ಸಾಂಕೇತಿಕ ಚಿತ್ರ)
Updated on

ಕಠ್ಮಂಡು: ಭಾರತದ ಮಹಿಳಾ ಪರ್ವತಾರೋಹಿ 27 ವರ್ಷದ ಬಲ್ಜಿತ್ ಕೌರ್, ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ 4 ರಿಂದ ನಾಪತ್ತೆಯಾಗಿದ್ದಾರೆ. ಪರ್ವತಾ ಅವರೋಹಣದ ವೇಳೆ ಆಕೆ ನಾಪತ್ತೆಯಾಗಿದ್ದಾರೆ ಎಂದು ಪರ್ವತಾರೋಹಣದ ಆಯೋಜಕರು ತಿಳಿಸಿದ್ದಾರೆ.
 
ಭಾರತದ ಮತ್ತೋರ್ವ ಪರ್ವತಾರೋಹಿ 6000 ಮೀಟರ್ ಗಳ ಎತ್ತರದಿಂದ ಕಂದಕಕ್ಕೆ ಉರುಳಿ ಬಿದ್ದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. 

ರಾಜಸ್ಥಾನದ ಕಿಶನ್ಗಡ್ ನ ನಿವಾಸಿಯಾಗಿರುವ ಅನುರಾಗ್ ಮಲು ಎಂಬುವವರು ಮೌಂಟ್ ಅನ್ನಪೂರ್ಣ ನ್ನು ಇಳಿಯುತ್ತಿದ್ದಾಗ ಕ್ಯಾಂಪ್ 3 ರಿಂದ ಸೋಮವಾರದಂದು, ನಾಪತ್ತೆಯಾಗಿದ್ದರು. ಆದರೆ ಅವರು 6000 ಮೀಟರ್ ಎತ್ತರದಿಂದ ಕಂದಕಕ್ಕೆ ಉರುಳಿಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಪ್ರಕಟಿಸಿತ್ತು.

ಈಗ ನಾಪತ್ತೆಯಾಗಿರುವ ಕೌರ್, ಕಳೆದ ವರ್ಷ ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಲೋತ್ಸೆ ಪರ್ವತಾರೋಹಣ ಮಾಡಿ 8000 ಮೀಟರ್ ನ್ನು ಒಂದೇ ಸೆಷನ್ ನಲ್ಲಿ ಏರಿದ ಮೊದಲ ಭಾರತೀಯರೆಂಬ ಖ್ಯಾತಿ ಪಡೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com