ಅಮಾನುಷ ದಾಳಿ: ವ್ಯಾಪಾರಿಯನ್ನು ಬ್ಯಾಟ್‌ನಿಂದ ಹೊಡೆದು ಕೊಂದ ಪೊಲೀಸ್ ಇನ್ಸ್‌ಪೆಕ್ಟರ್ ಪುತ್ರ; ಮೂಕಪ್ರೇಕ್ಷಕನಾಗಿ ನಿಂತ ತಂದೆ; ವಿಡಿಯೋ!

ಜೈಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು ಪೊಲೀಸ್ ಇನ್ಸ್‌ಪೆಕ್ಟರ್ ಪುತ್ರನೊಬ್ಬ ತಮ್ಮ ಮನೆ ಬಳಿ ಬಂಡಿ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯನ್ನು ಬ್ಯಾಟ್ ನಿಂದ ಹೊಡೆದು ಕೊಂದಿರುವ ದಾರುಣ ಘಟನೆ ನಡೆದಿದೆ. ಈ ಭೀಕರ ಘಟನೆ ಪೊಲೀಸ್ ಅಧಿಕಾರಿ ಕಣ್ಣೆದುರೇ ನಡೆದಿದೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಮಂಗಳವಾರ ರಾತ್ರಿ ಜೈಪುರದ ರಜನಿ ವಿಹಾರ್ ಕಾಲೋನಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಕ್ಷಿತಿಜ್ ಎಂಬ ಆರೋಪಿಯು ವ್ಯಾಪಾರಿ ಮೋಹನ್‌ಗೆ ಬ್ಯಾಟ್‌ನಿಂದ ಪದೇ ಪದೇ ಹೊಡೆಯುತ್ತಿರುವುದನ್ನು ಕಾಣಬಹುದು. ಆದರೆ ಕ್ಷಿತಿಜ್‌ನ ತಂದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದಾರೆ. ಮತ್ತೊಂದು ವೀಡಿಯೊ ಕ್ಷಿತಿಜ್ ಮತ್ತು ಅವನ ತಂದೆ ದಾಳಿಯ ನಂತರ ಮೃತನ ದೇಹವನ್ನು ಕಾರಿಗೆ ಹಾಕುತ್ತಿರುವುದು ಕಾರಣಬಹುದು.
ಕ್ಷಿತಿಜ್ ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ಭದ್ರತೆಯಲ್ಲಿ ಸಿಎಂಒದಲ್ಲಿ ನಿಯೋಜನೆಗೊಂಡಿರುವ ಇನ್ಸ್‌ಪೆಕ್ಟರ್ ಪ್ರಶಾಂತ್ ವರ್ಮಾ ಅವರ ಪುತ್ರ. ಆಪಾದಿತ ಕೊಲೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕವಾಗಿ ವೈರಲ್ ಆಗಿದ್ದು, ಇದರ ನಂತರ ಡಿಸಿಪಿ (ಪಶ್ಚಿಮ) ಅಮಿತ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಕ್ಷಿತಿಜ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಮೋಹನ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೋಲೀಸರ ಪ್ರಕಾರ, ಇನ್ಸ್‌ಪೆಕ್ಟರ್ ಪ್ರಶಾಂತ್ ಶರ್ಮಾ ಅವರ ಮಗ ಕ್ಷಿತಿಜ್ ಹಳೆ ದ್ವೇಷದಿಂದ ಮೋಹನ್‌ನನ್ನು ಬ್ಯಾಟ್‌ನಿಂದ ಹೊಡೆದು ಕೊಂದಿದ್ದಾನೆ. ರಜನಿ ವಿಹಾರ್ ಪಾರ್ಕ್ ಬಳಿ ಮೋಹನ್ ಆರಂಭಿಸಿದ್ದ ಅಂಗಡಿಗೆ ಕ್ಷಿತಿಜ್ ಸೇರಿದಂತೆ ಅನೇಕ ಜನರು ವಿರೋಧ ವ್ಯಕ್ತಪಡಿಸಿದ್ದರು. ಕ್ಷಿತಿಜ್ ಅಂಗಡಿಯನ್ನು ಅಲ್ಲಿಂದ ತೆಗೆದುಹಾಕಬೇಕೆಂದು ಬಯಸಿದ್ದನು. ಈ ಹಿಂದೆಯೂ ಸಹ ಮೋಹನ್ ನನ್ನು ಅಲ್ಲಿಂದ ಹೋಗುವಂತೆ ಹೇಳಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದರು.
ಮಂಗಳವಾರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕ್ಷಿತಿಜ್ ತನ್ನ ಮನೆಯ ಹೊರಗೆ ಮೋಹನ್ ಇರುವುದು ನೋಡಿದ್ದಾನೆ. ನಂತರ ಬ್ಯಾಟ್ ತಂದು ಮೋಹನ್ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದ್ದಾನೆ. ಅಮಾನುಷ ಹಲ್ಲೆಯಿಂದ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



