ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಿಸಿದ ಇಡಿ

ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಬ್ಯಾಂಕಿಂಗ್ ಮತ್ತು ವೈದ್ಯಕೀಯ ಖರೀದಿಯ ದಾಖಲೆಗಳನ್ನು "ವಿವಿಧ ಮೂಲಗಳಿಂದ" ಇಡಿ ಸಂಗ್ರಹಿಸಿದೆ.
ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
Updated on

ಕೋಲ್ಕತ್ತಾ: ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರ ಕೆಲವರ ಅವಧಿಯಲ್ಲಿ ನಡೆದ ಹಣಕಾಸು ಅಕ್ರಮಗಳ ತನಿಖೆಗಾಗಿ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ಸಿಬಿಐ ಎಫ್‌ಐಆರ್‌ ಅನ್ನು ಆಧರಿಸಿ ಕೇಂದ್ರ ತನಿಖಾ ಸಂಸ್ಥೆಯು, ಎಫ್‌ಐಆರ್‌ಗೆ ಸಮನಾದ ತನ್ನ ಎನ್‌ಫೋರ್ಸ್‌ಮೆಂಟ್ ಕೇಸ್ ಇನ್ಫರ್ಮೇಷನ್ ರಿಪೋರ್ಟ್ (ಇಸಿಐಆರ್)ಅನ್ನು ಮನಿ ಲಾಂಡರಿಂಗ್ ಆಕ್ಟ್‌ನ(ಪಿಎಂಎಲ್‌ಎ) ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಿಸಿದೆ.

ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಬ್ಯಾಂಕಿಂಗ್ ಮತ್ತು ವೈದ್ಯಕೀಯ ಖರೀದಿಯ ದಾಖಲೆಗಳನ್ನು "ವಿವಿಧ ಮೂಲಗಳಿಂದ" ಸಂಗ್ರಹಿಸಿದೆ ಮತ್ತು ಆರೋಪಿಗಳ ವಿಚಾರಣೆ, ಹೇಳಿಕೆಗಳನ್ನು ದಾಖಲಿಸಲು ಶೀಘ್ರದಲ್ಲೇ ಸಮನ್ಸ್ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
'ನಬಣ್ಣ ಅಭಿಜಾನ್' ವಿದ್ಯಾರ್ಥಿಗಳ ಪ್ರತಿಭಟನೆ: ಸಚಿವಾಲಯ ಸುತ್ತ ಕೋಲ್ಕತ್ತಾ ಪೊಲೀಸರಿಂದ ಬಿಗಿ ಭದ್ರತೆ

ಸಿಬಿಐ ದೂರಿನಲ್ಲಿರುವ ಆರೋಪಿಗಳನ್ನೇ ಇಡಿ ಪ್ರಕರಣದ ಆರೋಪಿಗಳನ್ನಾಗಿ ಮಾಡಿದೆ ಎಂದು ಅವರು ಹೇಳಿದ್ದಾರೆ.

ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ದಾಖಲಿಸಿದ ಎಫ್‌ಐಆರ್‌ನಲ್ಲಿ, ಘೋಷ್ ಮತ್ತು ಮೂರು ಕೋಲ್ಕತ್ತಾ ಮೂಲದ ಖಾಸಗಿ ಸಂಸ್ಥೆಗಳಾದ ಮಧ್ಯ ಜೋರೆಹತ್, ಬನಿಪುರ್, ಹೌರಾದಲ್ಲಿರುವ ಮಾ ತಾರಾ ಟ್ರೇಡರ್ಸ್; ಎಶಾನ್ ಕೆಫೆ 4/1, ಬೆಲ್ಗಾಚಿಯಾ ಮತ್ತು ಖಾಮಾ ಲೌಹಾಗಳನ್ನು ಆರೋಪಿಗಳನ್ನಾಗಿ ಮಾಡಿದೆ.

ಆಗಸ್ಟ್ 9 ರಂದು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಮರುದಿನ ಅಪರಾಧಕ್ಕೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ನನ್ನು ಬಂಧಿಸಲಾಗಿದ್ದು, ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.

ಈ ಭೀಕರ ಕೃತ್ಯವನ್ನು ಖಂಡಿಸಿ ವೈದ್ಯರು ಮತ್ತು ಸಾರ್ವಜನಿಕರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com