ಬಿಹಾರ ರಾಜಕೀಯ: ನಾಳೆ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆ- ಮೂಲಗಳು

ಬಿಹಾರದಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರೆದಿದ್ದು, ನಿತೀಶ್ ಕುಮಾರ್ ನಾಳೆ ಬೆಳಗ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.
ಮತ್ತೆ ಎನ್ ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಕ್ಕೆ?: ನಿತೀಶ್ ಕುಮಾರ್ ಹೇಳಿದ್ದೇನು?
ಮತ್ತೆ ಎನ್ ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಕ್ಕೆ?: ನಿತೀಶ್ ಕುಮಾರ್ ಹೇಳಿದ್ದೇನು?
Updated on: 

ಬಿಹಾರ: ಬಿಹಾರದಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರೆದಿದ್ದು, ನಿತೀಶ್ ಕುಮಾರ್ ನಾಳೆ ಬೆಳಗ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.

ನಿತೀಶ್ ಕುಮಾರ್ ಇಂದೇ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಎಲ್ಲಾ ಜೆಡಿಯು ಶಾಸಕರು ಬೆಂಬಲ ಪತ್ರ ನೀಡದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಭಾನುವಾರ ಬೆಳಗ್ಗೆ ಖಂಡಿತವಾಗಿಯೂ ರಾಜೀನಾಮೆ ನೀಡಲಿದ್ದಾರೆ  ಎಂದು ಮೂಲಗಳು ಹೇಳಿವೆ.

ದಿಢೀರ್ ಬೆಳವಣಿಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಮುಂದಾಗಿರುವುದರಿಂದ ಭಾನುವಾರವೂ ಸೆಕ್ರೆಟರಿಯೇಟ್‌ನಂತಹ ಸರ್ಕಾರಿ ಕಚೇರಿಗಳನ್ನು ತೆರೆದಿರಲು ತಿಳಿಸಲಾಗಿದೆ. 

ಈ ಮಧ್ಯೆ ಬಿಜೆಪಿ ಶಾಸಕಾಂಗ ಪಕ್ಷದ ನಡೆದಿದ್ದು, ನಿತೀಶ್ ಕುಮಾರ್ ಜೊತೆ ಸೇರಿ ಸರ್ಕಾರ ರಚಿಸುವ ಕುರಿತು ಯಾವುದೇ ಘೋಷಣೆ ನೀಡದಿರಲು ಕಮಲ ನಾಯಕರು ನಿರ್ಧರಿಸಿದ್ದಾರೆ. ಮೂರು ವರ್ಷಗಳ ಹಿಂದೆ ಎನ್ ಡಿಎ ಮೈತ್ರಿ ತೂರೆದಿದ್ದ ನಿತೀಶ್ ಕುಮಾರ್ ಅಧಿಕೃತ ಘೋಷಣೆ ನೀಡುವವರೆಗೂ ಬಿಜೆಪಿ ನಾಯಕರು ಯಾವುದೇ ಮಾಹಿತಿ ನೀಡದಂತೆ ಹೈಕಮಾಂಡ್ ನಿಂದ ಸೂಚನೆ ಬಂದಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com