ಚುನಾವಣಾ ಬಾಂಡ್ ಮೂಲಕ ಎಲ್ಲ ಪ್ರಾದೇಶಿಕ ಪಕ್ಷಗಳು ಸಂಗ್ರಹಿಸಿದ್ದು 5,221 ಕೋಟಿ ರೂ.; ಕಾಂಗ್ರೆಸ್, ಬಿಜೆಪಿ ಗಳಿಸಿದ್ದೆಷ್ಟು?

ಏಪ್ರಿಲ್ 2019 ಮತ್ತು ಜನವರಿ 2024ರ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ ಪ್ರಾದೇಶಿಕ ಪಕ್ಷಗಳು 5,221 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆಗಳನ್ನು ಪಡೆದಿವೆ. ಇದೇ ಅವಧಿಯಲ್ಲಿ ಬಿಜೆಪಿಯೊಂದೇ 6,060.51 ಕೋಟಿ ರೂಪಾಯಿ ಸಂಗ್ರಹಿಸಿದೆ.
ಬಿಜೆಪಿ - ಕಾಂಗ್ರೆಸ್ ಲೋಗೋ
ಬಿಜೆಪಿ - ಕಾಂಗ್ರೆಸ್ ಲೋಗೋ

ನವದೆಹಲಿ: ಏಪ್ರಿಲ್ 2019 ಮತ್ತು ಜನವರಿ 2024ರ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ ಪ್ರಾದೇಶಿಕ ಪಕ್ಷಗಳು 5,221 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆಗಳನ್ನು ಪಡೆದಿವೆ. ಇದೇ ಅವಧಿಯಲ್ಲಿ ಬಿಜೆಪಿಯೊಂದೇ 6,060.51 ಕೋಟಿ ರೂಪಾಯಿ ಸಂಗ್ರಹಿಸಿದೆ.

ಚುನಾವಣಾ ಆಯೋಗವು ಪ್ರಕಟಿಸಿದ ಚುನಾವಣಾ ಬಾಂಡ್‌ಗಳ ಅಂಕಿಅಂಶಗಳ ಪ್ರಕಾರ, ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಎಪಿ ಇದೇ ಅವಧಿಯಲ್ಲಿ ಕ್ರಮವಾಗಿ 1,421.86 ಕೋಟಿ ರೂ. ಮತ್ತು 65.45 ಕೋಟಿ ರೂ. ಗಳಿಸಿವೆ.

ಇತರ ರಾಷ್ಟ್ರೀಯ ಪಕ್ಷಗಳಾದ ಬಿಎಸ್‌ಪಿ, ಸಿಪಿಐ(ಎಂ) ಮತ್ತು ಎನ್‌ಪಿಪಿ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ಹಣವನ್ನು ಸ್ವೀಕರಿಸಿಲ್ಲ.

ಪ್ರಾದೇಶಿಕ ಪಕ್ಷಗಳಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾತ್ರ 1,609.53 ಕೋಟಿ ರೂ. ಗಳನ್ನು ಸಂಗ್ರಹಿಸಿದೆ. ಇದು ಚುನಾವಣಾ ಬಾಂಡ್‌ಗಳ ಮೂಲಕ ಇತರೆ 22 ಪ್ರಾದೇಶಿಕ ಪಕ್ಷಗಳು ಸ್ವೀಕರಿಸಿದ ಒಟ್ಟು ದೇಣಿಗೆಯ ಶೇ 30ರಷ್ಟಿದೆ

ಬಿಜೆಪಿ - ಕಾಂಗ್ರೆಸ್ ಲೋಗೋ
1,368 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿ ಅಗ್ರಸ್ಥಾನ ಪಡೆದ ‘ಲಾಟರಿ ಕಿಂಗ್’!

ಭಾರತ್ ರಾಷ್ಟ್ರ ಸಮಿತಿಯು (ಬಿಆರ್‌ಎಸ್) ಚುನಾವಣಾ ಬಾಂಡ್‌ಗಳ ಮೂಲಕ 1,214.70 ಕೋಟಿ ರೂ., ಬಿಜೆಡಿ 775.50 ಕೋಟಿ ರೂ., ಡಿಎಂಕೆ 639 ಕೋಟಿ ರೂ., ವೈಎಸ್‌ಆರ್‌ಸಿಪಿ 337 ಕೋಟಿ ರೂ., ಟಿಡಿಪಿ 218.88 ಕೋಟಿ ರೂ. ಮತ್ತು ಶಿವಸೇನೆ 159.38 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹಿಸಿವೆ.

ಚುನಾವಣಾ ಬಾಂಡ್‌ಗಳ ಮೂಲಕ ಆರ್‌ಜೆಡಿ 73.5 ಕೋಟಿ ರೂ., ಜೆಡಿಎಸ್‌ 43.40 ಕೋಟಿ ರೂ., ಸಿಕ್ಕಿಂ ಕ್ರಾಂತಿಕಾರಿ ಪಕ್ಷ 36.5 ಕೋಟಿ ರೂ., ಎನ್‌ಸಿಪಿ 31 ಕೋಟಿ ರೂ., ಜನಸೇನಾ ಪಕ್ಷ 21 ಕೋಟಿ ರೂ., ಎಸ್‌ಪಿ 14.05 ಕೋಟಿ ರೂ., ಜೆಡಿ(ಯು) 14.05 ಕೋಟಿ ರೂ. ಮತ್ತು ಜೆಎಂಎಂ 13.5 ಕೋಟಿ ರೂ. ಸಂಗ್ರಹಿಸಿವೆ.

ಬಿಜೆಪಿ - ಕಾಂಗ್ರೆಸ್ ಲೋಗೋ
22,217 ಚುನಾವಣಾ ಬಾಂಡ್ ಖರೀದಿ; 22,030 ನಗದಾಗಿ ಪರಿವರ್ತನೆ: ಸುಪ್ರೀಂ ಕೋರ್ಟ್ ಗೆ SBI ಮಾಹಿತಿ

ಅಕಾಲಿದಳ 7.2 ಕೋಟಿ ರೂ., ಎಐಎಡಿಎಂಕೆ 6.05 ಕೋಟಿ ರೂ., ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 5.5 ಕೋಟಿ ರೂ., ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ, ಜೆ&ಕೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಗೋವಾ ಫಾರ್ವರ್ಡ್ ಪಾರ್ಟಿ ಚುನಾವಣಾ ಬಾಂಡ್‌ಗಳ ಮೂಲಕ 1 ಕೋಟಿ ರೂ.ಗಿಂತ ಕಡಿಮೆ ಹಣವನ್ನು ಪಡೆದಿವೆ.

ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಿಂದಿನ ವರದಿಯ ಪ್ರಕಾರ, ಮಾರ್ಚ್ 2018 ರಿಂದ ಜನವರಿ 2024 ರವರೆಗೆ 16,518 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ. ಚುನಾವಣಾ ಆಯೋಗವು ಇಲ್ಲಿಯವರೆಗೆ ಪ್ರಕಟಿಸಿದ ಡೇಟಾವು 2018ರ ಮಾರ್ಚ್ ನಿಂದ 2019 ರ ಏಪ್ರಿಲ್ 11 ಅವಧಿಯಲ್ಲಿ ಮಾರಾಟವಾದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಒಳಗೊಂಡಿಲ್ಲ.

ಬಿಜೆಪಿ - ಕಾಂಗ್ರೆಸ್ ಲೋಗೋ
ರಿಲಾಯನ್ಸ್ ಗೆ ಸಂಬಂಧಿಸಿದ ಕ್ವಿಕ್ ಸಪ್ಲೇ 3 ನೇ ಅತಿ ದೊಡ್ಡ ಚುನಾವಣಾ ಬಾಂಡ್ ಖರೀದಿದಾರ: ರಿಲಾಯನ್ಸ್ ಪ್ರತಿಕ್ರಿಯೆ ಹೀಗಿದೆ...

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಎಸ್‌ಬಿಐನಲ್ಲಿ ವಿವಿಧ ಮುಖಬೆಲೆಯ ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಏಪ್ರಿಲ್ 1, 2019 ಮತ್ತು ಫೆಬ್ರುವರಿ 15, 2024 ರ ನಡುವೆ ಖರೀದಿಸಲಾಗಿದೆ. ಅವುಗಳಲ್ಲಿ 22,030 ಅನ್ನು ರಾಜಕೀಯ ಪಕ್ಷಗಳು ನಗದಾಗಿ ಪರಿವರ್ತಿಸಿಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com