ಶರಿಯಾ ಕೋರ್ಟ್ ಯಾವುದೇ ರೂಪದಲ್ಲೂ ಕಾನೂನಿನಲ್ಲಿ ಮಾನ್ಯತೆ ಹೊಂದಿಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ, 'ಕಾಝಿ ನ್ಯಾಯಾಲಯ,' 'ದಾರುಲ್ ಕಾಜಾ (ದಾರುಲ್ ಕಾಜಾ) ಕಜಿಯತ್ ನ್ಯಾಯಾಲಯ,' 'ಶರಿಯಾ ನ್ಯಾಯಾಲಯ' ಇತ್ಯಾದಿಗಳು ಯಾವುದೇ ಹೆಸರು ಅಥವಾ ಶೈಲಿಯಾಗಿದ್ದರೂ, ಕಾನೂನಿನಲ್ಲಿ ಯಾವುದೇ ಮಾನ್ಯತೆಯನ್ನು ಹೊಂದಿಲ್ಲ ಎಂದು ಹೇಳಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ಸಲ್ಲಿಸಲಾದ ಮುಸಲ್ಮಾನ ಮಹಿಳೆಯ ಜೀವನಾಂಶ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ 2018 ರ ಆದೇಶವನ್ನು ಪ್ರಶ್ನಿಸಿ ಶಹಜಹಾನ್ ಎಂಬ ಮಹಿಳೆ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಪೀಠವು ಈ ತೀರ್ಪು ನೀಡಿದೆ.
2010 ರಲ್ಲಿ ಝಾನ್ಸಿಯ ಕುಟುಂಬ ನ್ಯಾಯಾಲಯವು ತನ್ನ ಜೀವನಾಂಶವನ್ನು ನಿರಾಕರಿಸಿದ ತೀರ್ಪಿನ ವಿರುದ್ಧದ ಪರಿಷ್ಕರಣಾ ಅರ್ಜಿಯನ್ನು ಈ ಆದೇಶ ವಜಾಗೊಳಿಸಿತ್ತು. ಕುಟುಂಬ ನ್ಯಾಯಾಲಯವು ಆಕೆಯ ಇಬ್ಬರು ಮಕ್ಕಳಿಗೆ ಕೇವಲ 2,500 ರೂಪಾಯಿ ಜೀವನಾಂಶ ನೀಡಿತ್ತು.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ಉನ್ನತ ನ್ಯಾಯಾಲಯದ ದ್ವಿಸದಸ್ಯ ಪೀಠವು, ನ್ಯಾಯಾಲಯದ ತೀರ್ಪುಗಳು ಯಾರ ಮೇಲೂ ಬದ್ಧವಾಗಿಲ್ಲ ಮತ್ತು ಬಲವಂತದ ಕ್ರಮಗಳಿಂದ ಜಾರಿಗೊಳಿಸಲಾಗುವುದಿಲ್ಲ ಎಂದು ಹೇಳಿದೆ.