ಪಶ್ಚಿಮ ಬಂಗಾಳ ಚುನಾವಣೆ: ಅಂತಿಮ ಸುತ್ತಿನಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ. 18.39ರಷ್ಟು ಮತದಾನ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದಲ್ಲಿ 142 ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾದ ಮೊದಲ ಎರಡು ಗಂಟೆಗಳಲ್ಲೇ ದಾಖಲೆಯ ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
Mamata Banerjee
ಮಮತಾ ಬ್ಯಾನರ್ಜಿ
Updated on

ಪಶ್ಚಿಮ ಬಂಗಾಳ ವಿಧಾನಸಭೆಗೆ ಇಂದು 2ನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದೆ. ಒಟ್ಟು 3.21 ಕೋಟಿ ಮತದಾರರಲ್ಲಿ ಬೆಳಗ್ಗೆ 9 ಗಂಟೆಯ ವೇಳೆಗೆ 18.39 ಶೇಕಡಾ ಮಂದಿ ಮತದಾನ ಮಾಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದಲ್ಲಿ 142 ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾದ ಮೊದಲ ಎರಡು ಗಂಟೆಗಳಲ್ಲೇ ದಾಖಲೆಯ ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಬೆಳಗ್ಗೆ 9 ಗಂಟೆಯವರೆಗೆ, ಪುರಬಾ ಬರ್ಧಮಾನ ಜಿಲ್ಲೆಯಲ್ಲಿ ಅತ್ಯಧಿಕ 20.86 ಶೇಕಡಾ ಮತದಾನ ದಾಖಲಾಗಿದೆ, ನಂತರ ಹೂಘ್ಲಿ ಜಿಲ್ಲೆಯಲ್ಲಿ 20.16 ಶೇಕಡಾ ಮತದಾನವಾಗಿದೆ ಎಂದು ಅವರು ಹೇಳಿದ್ದಾರೆ.

Mamata Banerjee
ಪಶ್ಚಿಮ ಬಂಗಾಳ 2ನೇ ಹಂತದ ಮತದಾನ: ಆರಂಭದಲ್ಲಿ ಹಲವೆಡೆ ಹಿಂಸಾಚಾರ; ಚುನಾವಣಾ ವೀಕ್ಷಕರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ- ಮಮತಾ ಬ್ಯಾನರ್ಜಿ

ನಾಡಿಯಾ ಜಿಲ್ಲೆಯಲ್ಲಿ 18.5 ಶೇಕಡಾ ಮತದಾನ ದಾಖಲಾಗಿದ್ದು, ನಂತರ ಉತ್ತರ 24 ಪರಗಣಾ (17.81 ಶೇಕಡಾ), ಕೋಲ್ಕತ್ತಾ ಉತ್ತರ (17.28 ಶೇಕಡಾ) ಮತ್ತು ದಕ್ಷಿಣ 24 ಪರಗಣಾ (17.25 ಶೇಕಡಾ), ಕೋಲ್ಕತ್ತಾ ದಕ್ಷಿಣ (16.81 ಶೇಕಡಾ) ಮತದಾನವಾಗಿದೆ ಎಂದು ಅವರು ವಿವರಿಸಿದರು.

ಕೆಲವು ಪ್ರದೇಶಗಳಲ್ಲಿ ಸಣ್ಣ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಸಂಬಂಧಿತ ಅಧಿಕಾರಿಗಳಿಂದ ನಾವು ವರದಿಗಳನ್ನು ಕೇಳಿದ್ದೇವೆ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಪರೂಪದ ಭದ್ರತಾ ವ್ಯವಸ್ಥೆಗಳ ನಡುವೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದಲ್ಲಿ 142 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

Mamata Banerjee
Assembly elections: ಪ. ಬಂಗಾಳ ಅಂತಿಮ ಹಂತದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ. 61.1ರಷ್ಟು ಮತದಾನ: ಸಿಎಂ ಮಮತಾ ಬ್ಯಾನರ್ಜಿ ಸೇರಿ ಪ್ರಮುಖ ನಾಯಕರ ಭವಿಷ್ಯ ಇಂದು ನಿರ್ಧಾರ

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಕೋಲ್ಕತ್ತಾ, ಹೌರಾ, ಉತ್ತರ ಮತ್ತು ದಕ್ಷಿಣ 24 ಪರಗಣಾ, ನಾಡಿಯಾ, ಹೂಘ್ಲಿ ಮತ್ತು ಪುರಬಾ ಬರ್ಧಮಾನ ಜಿಲ್ಲೆಗಳ ಮತಗಟ್ಟೆಗಳ ಹೊರಗೆ ಮತದಾರರು ಸಾಲಿನಲ್ಲಿ ನಿಂತಿದ್ದರು. ಈ ಜಿಲ್ಲೆಗಳು ಒಟ್ಟಾಗಿ ರಾಜ್ಯದ ರಾಜಕೀಯ ಮತ್ತು ಚುನಾವಣಾ ಕೇಂದ್ರವನ್ನು ರೂಪಿಸುತ್ತವೆ.

ಈ ಹಂತದಲ್ಲಿ 41,001 ಮತಗಟ್ಟೆಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ಒಟ್ಟು 3,21,73,837 ಮತದಾರರು (ಇದಲ್ಲದೆ 1,64,35,627 ಪುರುಷರು, 1,57,37,418 ಮಹಿಳೆಯರು ಮತ್ತು 792 ತೃತೀಯ ಲಿಂಗ ಮತದಾರರು) ತಮ್ಮ ಮತವನ್ನು ಚಲಾಯಿಸಲು ಅರ್ಹರಾಗಿದ್ದಾರೆ. ಎಲ್ಲಾ ಮತಗಟ್ಟೆಗಳಿಗೂ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com