Spider-Man: ‘ಸ್ಪಾಯ್ಲರ್‌’ ಕೊಟ್ಟಿದ್ದಕ್ಕೆ ಥಿಯೇಟರ್‌ನಲ್ಲೇ ಹೊಡೆದಾಟ! ಸಿನಿಮಾ ನೋಡೋಕೆ ಹೋದವರ ಹೈಡ್ರಾಮಾ, Video

ನಾಲ್ವರು ಸ್ನೇಹಿತರು ಸ್ಪೈಡರ್ ಮ್ಯಾನ್ ಸಿನಿಮಾ ನೋಡಲು ಥಿಯೇಟರ್ ಗೆ ತೆರಳಿದ್ದ ವೇಳೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವಕನೊಬ್ಬ ತನ್ನ ಗೆಳತಿಗೆ ಸ್ಪಾಯ್ಲರ್ ನೀಡಿದ್ದಾನೆ.
Spider-Man Movie Turns Into Real-Life Brawl
ಸಿನಿಮಾ ವೀಕ್ಷಣೆ ವೇಳೆ ಹೊಡೆದಾಟ
Updated on

ಬೆಂಗಳೂರು: ಹಾಲಿವುಡ್ ನ ಬಹುನಿರೀಕ್ಷಿತ ‘Spider-Man: Brand New Day’ ಸಿನಿಮಾ ನೋಡುತ್ತಿದ್ದ ವೇಳೆ ಥಿಯೇಟರ್ ನಲ್ಲಿ ಹೈಡ್ರಾಮಾ ನಡೆದಿದ್ದು, ‘ಸ್ಪಾಯ್ಲರ್‌’ ಕೊಟ್ಟ ಆರೋಪದ ಮೇರೆಗೆ ಯುವಕನೋರ್ವನನ್ನು ಇತರೆ ಪ್ರೇಕ್ಷಕರು ಥಳಿಸಿದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

@SaffronChargers ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಇಲ್ಲಿ ಅಪ್ಲೋಡ್ ಆಗಿರುವ ಪೋಸ್ಟ್ ನ ಅನ್ವಯ, ನಾಲ್ವರು ಸ್ನೇಹಿತರು ಸ್ಪೈಡರ್ ಮ್ಯಾನ್ ಸಿನಿಮಾ ನೋಡಲು ಥಿಯೇಟರ್ ಗೆ ತೆರಳಿದ್ದ ವೇಳೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವಕನೊಬ್ಬ ತನ್ನ ಗೆಳತಿಗೆ ಸ್ಪಾಯ್ಲರ್ ನೀಡಿದ್ದಾನೆ.

ಆ ಯುವಕ ಈಗಾಗಲೇ ಸಿನಿಮಾವನ್ನು ಒಮ್ಮೆ ನೋಡಿದ್ದ. ಹೀಗಾಗಿ, ತನ್ನ ಸ್ನೇಹಿತೆಯೊಂದಿಗೆ ಎರಡನೇ ಬಾರಿ ಸಿನಿಮಾ ನೋಡಲು ಬಂದಿದ್ದ ಆತ, ಸಿನಿಮಾ ನಡೆಯುತ್ತಿದ್ದಂತೆ ಆಕೆಗೆ ಕಥೆಯನ್ನು ವಿವರಿಸುತ್ತಿದ್ದ. ಮುಂದಿನ ದೃಶ್ಯದಲ್ಲಿ ಏನಾಗಲಿದೆ, ಕಥೆ ಹೇಗೆ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಮೊದಲೇ ಹೇಳುತ್ತಾ ಹೋಗಿದ್ದ.

Spider-Man Movie Turns Into Real-Life Brawl
Ramayana: ‘ಯಶ್‌ ಕೆಟ್ಟ ನಟ, ರಾವಣನ ಪಾತ್ರದಲ್ಲಿ ಹುಡುಗಿಯಂತೆ ಮಾತನಾಡ್ತಾರೆ’: ಮತ್ತೆ KRK ಉದ್ಧಟತನ, ಬಟ್ಟೆ ಸುತ್ತಿ ಹೊಡೆದ ಅಭಿಮಾನಿಗಳು!

ಚಿತ್ರದ ಮುಂದಿನ ಸನ್ನಿವೇಶದಲ್ಲಿ ಏನಾಗುತ್ತದೆ ಎಂಬುದನ್ನು ಆಕೆಗೆ ವಿವರಿಸುತ್ತಿದ್ದ. ಈ ವೇಳೆ ಯುವಕರು ಆತನೊಂದಿಗೆ ವಾಕ್ಸಮರ ನಡೆಸಿದ್ದು, ಕಥೆ ಹೇಳದಂತೆ ಸೂಚಿಸಿದ್ದಾರೆ.

ಈ ವೇಳೆ ಇಬ್ಬರ ನಡುವೆ ಪರಸ್ಪರ ವಾಕ್ಸಮರ ನಡೆದಿದ್ದು, ನೋಡ ನೋಡುತ್ತಲೇ ಎಲ್ಲರೂ ಕೈಕೈ ಮಿಲಾಯಿಸಿದ್ದಾರೆ. ಕೊನೆಗೆ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿ ಥಿಯೇಟರ್‌ನಲ್ಲೇ ಹೈಡ್ರಾಮಾ ಸೃಷ್ಟಿಯಾಗಿದೆ.

ಇಬ್ಬರ ಗುಂಪು ಪರಸ್ಪರ ಹೊಡೆದಾಡಿಕೊಂಡಿದ್ದರಿಂದ ಥಿಯೇಟರ್‌ನಲ್ಲಿ ಕೆಲಕಾಲ ಸಂಪೂರ್ಣ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಿನಿಮಾದ ರೋಚಕ ದೃಶ್ಯಗಳನ್ನು ನೋಡಬೇಕಿದ್ದ ಪ್ರೇಕ್ಷಕರಿಗೆ ಜಗಳವೇ ಪ್ರಮುಖ ‘ಶೋ’ ಆಗಿಬಿಟ್ಟಿದೆ.

ಸಿನಿಮಾ ನೋಡಿದ್ರಾ? ಸ್ಪಾಯ್ಲರ್‌ ಕೊಡಬೇಡಿ!

ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಈಗಾಗಲೇ ನೋಡಿದ್ದರೂ, ಅದನ್ನು ಮೊದಲ ಬಾರಿಗೆ ವೀಕ್ಷಿಸುತ್ತಿರುವವರ ಅನುಭವವನ್ನು ಗೌರವಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸಿನಿಮಾದ ಕಥೆ, ಕ್ಲೈಮ್ಯಾಕ್ಸ್‌ ಅಥವಾ ಮುಂದಿನ ಪ್ರಮುಖ ದೃಶ್ಯಗಳನ್ನು ಮೊದಲೇ ಹೇಳುವುದರಿಂದ ಇತರರ ಅನುಭವ ಹಾಳಾಗಬಹುದು. ಹೀಗಾಗಿ, ಸಿನಿಮಾ ನೋಡಿರುವವರು ಪಕ್ಕದಲ್ಲಿರುವವರಿಗೆ ಸ್ಪಾಯ್ಲರ್‌ ನೀಡುವುದನ್ನು ತಪ್ಪಿಸುವುದು ಒಳಿತು ಎಂಬ ಸಂದೇಶವನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com