ರಾಹುಲ್ ಜೊತೆ ನೇರ ಸಂವಾದ: Gen-Z ಗಾಗಿ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಕಾರ್ಯಕ್ರಮ ಆರಂಭ!

ವಿದ್ಯಾರ್ಥಿಗಳೇ, Gen-Z -- ನಾನು ನಿಮ್ಮೊಂದಿಗೆ ಮಾತನಾಡಲು ಇಲ್ಲಿದ್ದೇನೆ. Instagram ನಲ್ಲಿ ನನ್ನನ್ನು ಕೇಳಿ ಮತ್ತು ನಾನು ಸಾಧ್ಯವಾದಷ್ಟು ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.
Rahul Ganhi
ರಾಹುಲ್ ಗಾಂಧಿ
Updated on

ನವದೆಹಲಿ: ಇನ್ಸ್ಟಾಗ್ರಾಮ್ ನಲ್ಲಿ Gen-Z ಸಂಪರ್ಕಿಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ. "Ask Me Anything" ಸೆಷನ್ಸ್ ಆರಂಭಿಸಿದ್ದಾರೆ. ವಿದ್ಯಾರ್ಥಿಗಳು ನೇರವಾಗಿ ಅವರೊಂದಿಗೆ ಮಾತನಾಡಲು ಆಹ್ವಾನಿಸಿದ್ದಾರೆ. Instagram ಸ್ಟೋರೀಸ್ ಮೂಲಕ ಪ್ರಶ್ನೆಗಳನ್ನು ಕೇಳಲು ಯುವ ಜನತೆಯನ್ನು ಆಹ್ವಾನಿಸಿದ್ದು, ಸಾಧ್ಯವಾದಷ್ಟು ಉತ್ತರಿಸುವುದಾಗಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ Instagram ಉಪಕ್ರಮದ ಲಿಂಕ್ ಅನ್ನು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದು, ವಿದ್ಯಾರ್ಥಿಗಳೇ, Gen-Z -- ನಾನು ನಿಮ್ಮ ಮಾತು ಕೇಳಲು ಇಲ್ಲಿದ್ದೇನೆ. Instagram ನಲ್ಲಿ ನನ್ನನ್ನು ಕೇಳಿ ಮತ್ತು ಸಾಧ್ಯವಾದಷ್ಟು ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಯಲ್ಲಿ ಕಳೆದ ತಿಂಗಳು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಜುಲೈ 20 ರಂದು ಸಂಸದ ಚಲೋ ವೇಳೆ ಪೊಲೀಸ್ ಲಾಠಿಚಾರ್ಜ್ ನಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಗುಂಪನ್ನು ಭೇಟಿಯಾದ ಒಂದು ದಿನದ ನಂತರ ರಾಹುಲ್ ಗಾಂಧಿ ಈಗ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ.

ಪ್ರತಿಭಟನಾ ನಿರತ ಯುವಕರ ಮೇಲಿನ ಹಿಂಸಾಚಾರಕ್ಕೆ ಗೃಹ ಸಚಿವ ಅಮಿತ್ ಶಾ ಕಾರಣ ಮತ್ತು ವಿದ್ಯಾರ್ಥಿಗಳಿಗೆ ಏನಾಯಿತು ಎಂದು ಸಂಸತ್ತಿನಲ್ಲಿ ವಿವರಿಸಲು ಅವರಿಗೆ ಧೈರ್ಯವಿಲ್ಲ ಎಂದು ಗಾಂಧಿಯವರು ಬುಧವಾರ ಆರೋಪಿಸಿದ್ದರು.

Rahul Ganhi
ಅಪರಾಧಿ ಪ್ರಜ್ಞೆಯಿಂದ ಅಮಿತ್ ಶಾ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ; ಸಂಸತ್ತನ್ನು ಎದುರಿಸುವ ಧೈರ್ಯ ಇಲ್ಲ: ರಾಹುಲ್ ಗಾಂಧಿ

ರಾಹುಲ್ ಗಾಂಧಿ ತಮ್ಮ ಇತ್ತೀಚೆಗೆ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ತಮ್ಮ ಮಾತುಕತೆಗಳ ವಿಡಿಯೋ ತುಣುಕುಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿಯಮಿತವಾಗಿ ಪೋಸ್ಟ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com