ಫೋರ್ಕ್, ಸ್ಪೂನ್ ಬಳಸಿ ದೋಸೆ ತಿನ್ನೋದು ಹೇಗೆ ಎಂದು ತೋರಿಸಿಕೊಟ್ಟ ಟೇಬಲ್ ಮ್ಯಾನರ್ಸ್ ಕೋಚ್: ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆ-Video

ಇಲ್ಲೊಬ್ಬರು ಡೇಬಲ್ ಮ್ಯಾನರ್ಸ್ ಕೋಚ್ ಫೋರ್ಕ್ ಮತ್ತು ಚಮಚ ಬಳಸಿ ದೋಸೆ ತಿನ್ನುವುದು ಹೇಗೆ ಎಂಬುದನ್ನು ಕಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Etiqutte coach
ಕೋಚ್ ನಿಂದ ದೋಸೆ ತಿನ್ನುವ ವಿಧಾನ
Updated on

ಕೆಲವು ಖಾದ್ಯಗಳನ್ನು ಹಿಂದಿನಿಂದ ಹೇಗೆ ಸೇವಿಸುತ್ತಾ ಬಂದಿದ್ದೇವೋ, ಅದೇ ರೀತಿಯಲ್ಲಿ ತಿಂದರೆ ನೋಡಲು ಅಂದ ಚೆಂದ. ಆದರೆ ಶಿಷ್ಟಾಚಾರದ ಹೆಸರಿನಲ್ಲಿ, ಸಾಂಪ್ರದಾಯಿಕವಾಗಿ ಕೈಯಿಂದ ತಿನ್ನುವ ಆಹಾರಗಳನ್ನೂ ಈಗ ಕೆಲವರು ಫೋರ್ಕ್, ಸ್ಪೂನ್ ಬಳಸಿ ತಿನ್ನಲು ಆರಂಭಿಸಿದ್ದಾರೆ.

ಇಲ್ಲೊಬ್ಬರು ಫೋರ್ಕ್ ಮತ್ತು ಚಮಚ ಬಳಸಿ ದೋಸೆ ತಿನ್ನುವುದು ಹೇಗೆ ಎಂಬುದನ್ನು ಕಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಿ ವೆಸ್ಟರ್ನ್ ವಿಂಗ್ಸ್ ಸ್ಪೋಕನ್ ಇಂಗ್ಲಿಷ್ (@westernwingsspokenenglish) ಎಂಬ ಇನ್‌ಸ್ಟಾಗ್ರಾಂ ಖಾತೆ ದೋಸೆಯನ್ನು ತಿನ್ನುವ ಸರಿಯಾದ ವಿಧಾನ ಎಂದು ಹೇಳುವ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ತರಬೇತುದಾರರೊಬ್ಬರು ಫೋರ್ಕ್ ಮತ್ತು ಚಮಚ ಬಳಸಿ ದೋಸೆ ತಿನ್ನುತ್ತಿರುವುದು ಕಾಣಿಸುತ್ತದೆ. ಆದರೆ ಬಹುತೇಕ ದೋಸೆ ಪ್ರಿಯರ ಪ್ರಕಾರ, ದೋಸೆಯನ್ನು ಕೈಯಿಂದ ತಿಂದರೇ ನೋಡಲು ಚೆಂದ ಮತ್ತು ರುಚಿ.

ದೋಸೆ ತಿನ್ನುವ ಶಿಷ್ಟಾಚಾರದ ವಿಡಿಯೋ ವೈರಲ್

ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮೊದಲು ದೋಸೆಯನ್ನು ಎರಡೂ ಬದಿಗಳಿಂದ ತಿರುಗಿಸುತ್ತಾರೆ. ಬಳಿಕ ಚಮಚ ಮತ್ತು ಚಾಕು ಬಳಸಿ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ತಿನ್ನುತ್ತಾರೆ. ಈ ವಿಡಿಯೋ ಪ್ರಕಾರ, ಕೈಯಿಂದ ನೇರವಾಗಿ ತಿನ್ನದೆ ಸಾಧನಗಳನ್ನು ಬಳಸುವುದರಿಂದ ಸ್ವಚ್ಛತೆ ಕಾಪಾಡಿಕೊಳ್ಳಲು ಹಾಗೂ ಆಹಾರವನ್ನು ಅಚ್ಚುಕಟ್ಟಾಗಿ ಮತ್ತು ಆತ್ಮವಿಶ್ವಾಸದಿಂದ ಸವಿಯಲು ಸಾಧ್ಯವಾಗುತ್ತದೆ.

ಆದರೆ ದೋಸೆಯನ್ನು ತಿನ್ನುವ ಈ ವಿಭಿನ್ನ ವಿಧಾನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ದೋಸೆ ತಿನ್ನುವ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೋ ವೈರಲ್ ಆಗುತ್ತಿದ್ದಂತೆ, ದೋಸೆಯನ್ನು ಚಮಚ-ಫೋರ್ಕ್‌ನಿಂದ ತಿನ್ನಬೇಕೇ ಅಥವಾ ಕೈಯಿಂದಲೇ ತಿನ್ನಬೇಕೇ ಎಂಬ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

“ದೋಸೆ ನೋಡಲು ಬಂದೆ, ಶಿಷ್ಟಾಚಾರದ ಪಾಠ ಕಲಿತು ಹೊರಟೆ” ಎಂದು ಒಬ್ಬ ನೆಟ್ಟಿಗರು ಹೇಳಿದ್ದಾರೆ.

ಮತ್ತೊಬ್ಬರು , “ಎಂಥಾ ವ್ಯರ್ಥ! ದಕ್ಷಿಣ ಭಾರತೀಯ ಆಹಾರವನ್ನು ಕೈಯಿಂದಲೇ ತಿನ್ನಬೇಕು” ಎಂದು ಬರೆದಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನೋಡಿದ ನಂತರ ನನ್ನ ದೋಸೆ ತಿನ್ನುವ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕು ಅನಿಸುತ್ತಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಹಾಸ್ಯವಾಗಿ, ಇಷ್ಟು ಹೊತ್ತಿನಲ್ಲಿ ನಾನು ದೋಸೆ ತಿಂದು ಮುಗಿಸುತ್ತಿದ್ದೆ ” ಎಂದು ಹೇಳಿದ್ದಾರೆ. ಇನ್ನೊಬ್ಬ X ಬಳಕೆದಾರರು, ಇದನ್ನು ಶಸ್ತ್ರಚಿಕಿತ್ಸೆಯಂತೆ ಪರಿಗಣಿಸಬೇಡಿ ಎಂದು ವ್ಯಂಗ್ಯವಾಡಿದ್ದಾರೆ.

Etiqutte coach
ದೋಸೆ ಹಂಚಿಗೆ ಅಂಟಿಕೊಂಡು ಹಾಳಾಗುತ್ತಿದೆಯಾ? ಹಾಗಾದ್ರೆ, ಗರಿಗರಿ ದೋಸೆ ಮಾಡಲು ಈ ಸರಳ ಹಾಕ್ಸ್ ಟ್ರೈ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com