ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲೆಂದು ಬಾಯ್ ಫ್ರೆಂಡ್ ಕಾರಿಗೆ ಲಿಪ್ ಸ್ಟಿಕ್ ನಿಂದ ಮುತ್ತು ಹಚ್ಚಿದ ಯುವತಿ, ಪೊಲೀಸರಿಂದ ಬಿತ್ತು ದಂಡ-Viral Video

ಕಾರು ಮಾಲೀಕ ಆದಿತ್ಯ ಸಿಕರ್ವಾರ್ , ಇದು ಕಾನೂನುಬಾಹಿರ ಎಂಬುದು ತಮ್ಮಿಬ್ಬರಿಗೂ ತಿಳಿದಿರಲಿಲ್ಲ, ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದಾರೆ.
car was covered with lipstick marks
ಕಾರು ತುಂಬಾ ಕಿಸ್ ಬಣ್ಣ ಹಚ್ಚಿದ ಯುವಕನಿಗೆ ದಂಡ
Updated on

ಸೋಷಿಯಲ್ ಮೀಡಿಯಾ ಪ್ರಚಾರಕ್ಕಾಗಿ ತನ್ನ ಕಾರಿನ ಮೇಲೆ 3,400 ಲಿಪ್‌ಸ್ಟಿಕ್ ಮುದ್ದಿನ (Kiss) ಗುರುತುಗಳನ್ನು ಹಾಕಿಕೊಂಡು, ಅಪಾಯಕಾರಿ ಸಾಹಸ ಪ್ರದರ್ಶಿಸಿದ ಗ್ವಾಲಿಯರ್ ಮೂಲದ ಯುವಕನಿಗೆ ಪೊಲೀಸರು 5,500 ರೂಪಾಯಿ ದಂಡ ವಿಧಿಸಿದ್ದಾರೆ. ಆತನ ಗರ್ಲ್ ಫ್ರೆಂಡ್ ಸುಮಾರು 3 ಗಂಟೆಗಳ ಕಾಲ ಶ್ರಮಿಸಿ ಈ ಲಿಪ್‌ಸ್ಟಿಕ್ ಗುರುತುಗಳನ್ನು ಮಾಡಿದ್ದರು ಎನ್ನಲಾಗಿದೆ.

ಕಾರು ಮಾಲೀಕ ಆದಿತ್ಯ ಸಿಕರ್ವಾರ್ , ಇದು ಕಾನೂನುಬಾಹಿರ ಎಂಬುದು ತಮ್ಮಿಬ್ಬರಿಗೂ ತಿಳಿದಿರಲಿಲ್ಲ, ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದಾರೆ.

ಲಿಪ್‌ಸ್ಟಿಕ್ ಗುರುತುಗಳಿಂದ ಕೂಡಿದ್ದ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಎರಡು ದಿನಗಳ ಹಿಂದೆ, ಸಿಟಿ ಸೆಂಟರ್ ಪ್ರದೇಶದಲ್ಲಿ ಲಿಪ್‌ಸ್ಟಿಕ್ ರೀತಿಯ ಗುರುತುಗಳಿದ್ದ ಕಾರೊಂದು ಸಂಚರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು ಎಂದು ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಅಭಿಷೇಕ್ ರಘುವಂಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನನ್ನ ಗೆಳತಿ ಹೀಗೆ ಲಿಪ್ ಸ್ಟಿಕ್ ಗುರುತನ್ನು ಕಾರಿಗೆ ಹಾಕಿದಳು. ನಾನು ಕಾರನ್ನು ಪಾರ್ಕ್ ಮಾಡಿ ದೂರ ಹೋಗಿದ್ದಾಗ, ಅವರು ಈ ಗುರುತುಗಳನ್ನು ಮಾಡಿದ್ದರು. ನಾನು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದೆ. ಹೀಗೆ ಮಾಡಿದರೆ ವಿಡಿಯೋ ವೈರಲ್ ಆಗುತ್ತದೆ ಎಂದು ನನ್ನ ಸ್ನೇಹಿತೆ ಭಾವಿಸಿದ್ದರು, ಅದರಂತೆ ನಾವು ಪೋಸ್ಟ್ ಮಾಡಿದೆವು ಅದು ವೈರಲ್ ಕೂಡ ಆಯಿತು ಎಂದರು.

ದಂಡ ವಿಧಿಸಲು ಕಾರಣವೇನು?

ವಾಹನವನ್ನು ಅನಧಿಕೃತವಾಗಿ ಮಾರ್ಪಡಿಸಿದ್ದಕ್ಕಾಗಿ (Vehicle Modification) ಪೊಲೀಸರು ಸಿಕರ್ವಾರ್ ಅವರಿಗೆ ದಂಡ ವಿಧಿಸಿದ್ದಾರೆ. ಕಾರನ್ನು ಪತ್ತೆಹಚ್ಚಿದ ನಂತರ, ಅಧಿಕಾರಿಗಳು ಮಾಲೀಕರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಿದರು. ಇದರ ಜೊತೆಗೆ, ಕಾರಿನ ಮೇಲಿದ್ದ ಎಲ್ಲಾ ಲಿಪ್‌ಸ್ಟಿಕ್ ಗುರುತುಗಳನ್ನು ಒರೆಸಿ ಸ್ವಚ್ಛಗೊಳಿಸುವಂತೆ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com