ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ: ಹರಿಯಾಣ, ರಾಜಸ್ಥಾನದಲ್ಲಿ ಶೂಟರ್ ಸೇರಿ ಆರು ಮಂದಿ ಬಂಧನ

ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಭಾನುವಾರ ರಾತ್ರಿ ಹರಿಯಾಣ ಮತ್ತು ರಾಜಸ್ಥಾನದಲ್ಲಿ ಪ್ರಮುಖ ಆರೋಪಿ, ಶೂಟರ್ ದೀಪಕ್ ಶರ್ಮಾ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಐವರನ್ನು ಬಂಧಿಸಿದ್ದಾರೆ.
Rohit Shetty firing case: Shooter among six held from Haryana, Rajasthan
ರೋಹಿತ್ ಶೆಟ್ಟಿ ಮನೆ
Updated on

ಮುಂಬೈ: ಮುಂಬೈ ಪೊಲೀಸರು ಸೋಮವಾರ ಬಾಲಿವುಡ್ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಜುಹುವಿನ ಮನೆ ಮೇಲೆ ಐದು ಸುತ್ತು ಗುಂಡು ಹಾರಿಸಿದ ಆರೋಪಿ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಭಾನುವಾರ ರಾತ್ರಿ ಹರಿಯಾಣ ಮತ್ತು ರಾಜಸ್ಥಾನದಲ್ಲಿ ಪ್ರಮುಖ ಆರೋಪಿ, ಶೂಟರ್ ದೀಪಕ್ ಶರ್ಮಾ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಐವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ದೀಪಕ್ ಶರ್ಮಾ ಮತ್ತು ಇತರ ಐವರ ಬಂಧನದೊಂದಿಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 11 ಜನರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮುಂಬೈಗೆ ಕರೆತರಲಾಗಿದೆ ಎಂದು ಅವರು ಹೇಳಿದ್ದಾರೆ.

Rohit Shetty firing case: Shooter among six held from Haryana, Rajasthan
Watch | ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದ ಹೊರಗೆ ಗುಂಡಿನ ಸದ್ದು!

ಫೆಬ್ರವರಿ 1 ರಂದು ಬೆಳಗಿನ ಜಾವ 12.45 ಕ್ಕೆ ರೋಹಿತ್ ಶೆಟ್ಟಿ ಅವರ ಜುಹು ಪ್ರದೇಶದಲ್ಲಿರುವ ಒಂಬತ್ತು ಅಂತಸ್ತಿನ ಕಟ್ಟಡದ ಮೊದಲ ಮಹಡಿ ಮೇಲೆ ಕನಿಷ್ಠ ಐದು ಸುತ್ತು ಗುಂಡು ಹಾರಿಸಲಾಯಿತು.

ಬಂಧಿತ ಇತರ ಐವರನ್ನು ಆದಿತ್ಯ ಗಯಾಕಿ(19), ಸಿದ್ಧಾರ್ಥ್ ಯೆನ್‌ಪುರೆ(20), ಸಮರ್ಥ್ ಪೊಮಾಜಿ(18), ಸ್ವಪ್ನಿಲ್ ಸಕತ್ (23) ಮತ್ತು ಆಸಾರಾಮ್ ಫಸಲೆ ಎಂದು ಗುರುತಿಸಲಾಗಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಶುಭಮ್ ಲೋಂಕರ್ ಸಹ ಪ್ರಕರಣದ ಆರೋಪಿಯಾಗಿದ್ದು, ಗುಂಡು ಹಾರಿಸಿದ ವ್ಯಕ್ತಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾಗಿ ಅಧಿಕಾರಿ ಹೇಳಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಶುಭಮ್ ಲೋಂಕರ್, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ರೋಹಿತ್ ಶೆಟ್ಟಿ ನಿವಾಸದಲ್ಲಿ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com