'ನಿಮ್ಮ 6 ನನಗೆ 9 ಆಗಬಹುದು': India AI Summit ನಲ್ಲಿ ರೋಬೋಡಾಗ್ ಬಗ್ಗೆ ಮಾತನಾಡಿ ಭಾರೀ ಸುದ್ದಿಯಾದ ನೇಹಾ ಸಿಂಗ್ ಯಾರು? Viral Video

“ಒರಿಯನ್” ಚೀನಾ ಮೂಲದ ಕಂಪೆನಿಯಲ್ಲಿ ತಯಾರಾಗಿದೆ ಎಂಬುದು ಬಹಿರಂಗವಾಗುತ್ತಿದ್ದಂತೆ ವಿವಾದ ಉಂಟಾಯಿತು.
Galgotias University professor Neha Singh
ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್
Updated on

ದೆಹಲಿ ಇಂಡಿಯಾ ಎಐ ಸಮಿಟ್‌ನಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ ಪ್ರದರ್ಶಿಸಿದ್ದ “ಒರಿಯನ್” ಎಂಬ ರೋಬೋಟ್ ಡಾಗ್ ನ್ನು ಕ್ಯಾಂಪಸ್‌ನಲ್ಲೇ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿಕೆ ನೀಡಿ ವಿವಾದ ಉಂಟಾಗಿದ್ದು, ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ್ದ ಹೇಳಿಕೆ ಭಾರೀ ವೈರಲ್ ಆಗಿದೆ.

“ಒರಿಯನ್” ಚೀನಾ ಮೂಲದ ಕಂಪೆನಿಯಲ್ಲಿ ತಯಾರಾಗಿದೆ ಎಂಬುದು ಬಹಿರಂಗವಾಗುತ್ತಿದ್ದಂತೆ ವಿವಾದ ಉಂಟಾಯಿತು. ಈ ಬಗ್ಗೆ ಸ್ಪಷ್ಟನೆ ನೀಡಲು ಪ್ರಯತ್ನಿಸಿದ ನೇಹಾ ಸಿಂಗ್, “ನಿಮ್ಮ ಆರು ನನಗೆ ಒಂಬತ್ತು ಆಗಿ ಕಾಣಿಸಬಹುದು” ಎಂದು ಹೇಳಿದರು. ವಿಶ್ವವಿದ್ಯಾಲಯವು ಇದರಲ್ಲಿ ಯಾರನ್ನೂ ಕೂಡ ತಪ್ಪಾಗಿ ದಾರಿಗೆಳೆಯಲು ಯತ್ನಿಸಿಲ್ಲ ಎಂದು ಹೇಳಿದ ಅವರು, “ಇದನ್ನು ತಪ್ಪು ಮಾಹಿತಿ ಎಂದು ಕರೆಯುವುದು ತಪ್ಪು. ನೀವು ಪತ್ರಕರ್ತರು. ಇಂತಹ ಪದಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಒಂದು ತಪ್ಪು ಅರ್ಥೈಸಿಕೆಯಿಂದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ” ಎಂದು ಹೇಳಿದರು.

Galgotias University professor Neha Singh
ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ 'ರೋಬೋಡಾಗ್' ವಿವಾದ: ಗ್ಯಾಲ್ಗೋಟಿಯಾಸ್ ವಿವಿ ಕ್ಷಮೆಯಾಚನೆ!

“I am your 6, can you be my 9” ಏನಿದರ ಅರ್ಥ?

ಈ ವಾಕ್ಯವು ಜನರ ದೃಷ್ಟಿಕೋನ ಮತ್ತು ಪರಸ್ಪರ ಬೆಂಬಲದ ಬಗ್ಗೆ ಹೇಳುತ್ತದೆ. ಒಂದೇ ಪರಿಸ್ಥಿತಿಯನ್ನು ಇಬ್ಬರು ಬೇರೆ ಬೇರೆ ರೀತಿಯಲ್ಲಿ ನೋಡಬಹುದು — ಒಬ್ಬರಿಗೆ ಅದು 6 ಆಗಿ ಕಾಣಬಹುದು, ಮತ್ತೊಬ್ಬರಿಗೆ 9 ಆಗಿ ಕಾಣಬಹುದು — ಹಾಗೆಂದು ಇಬ್ಬರೂ ತಪ್ಪು ಎಂದು ಹೇಳಬೇಕಿಲ್ಲ.

ಇದು ಸಹಾನುಭೂತಿ, ಪರಸ್ಪರ ಅರ್ಥೈಸುವಿಕೆ ಮತ್ತು ಒಬ್ಬರ ದೃಷ್ಟಿಕೋನವನ್ನು ಮತ್ತೊಬ್ಬರು ಗೌರವಿಸುವ ಮನೋಭಾವವನ್ನು ಒತ್ತಿಹೇಳುತ್ತದೆ. ಅಂದರೆ, ಎರಡೂ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವ ಸಂದೇಶವನ್ನು ಇದು ನೀಡುತ್ತದೆ.

ಗ್ರೇಟರ್ ನೋಯ್ಡಾದಲ್ಲಿರುವ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ, ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ 2026ರ ಪ್ರಚಾರ ವಿಡಿಯೋದಲ್ಲಿ “ಒರಿಯನ್” ಪದವನ್ನು ತಮ್ಮದೇ ಆಂತರಿಕ ಆವಿಷ್ಕಾರವೆಂದು ಪರಿಚಯಿಸಿದ ಹಿನ್ನೆಲೆಯಲ್ಲಿ ಭಾರೀ ಟೀಕೆಗೆ ಗುರಿಯಾಯಿತು. ಜನರು ರೋಬೋಡಾಗ್ ನ್ನು ಚೀನಾದ ಯುನಿಟ್ರೀ ಕಂಪನಿಯ Go2 ಮಾದರಿ ಎಂದು ಗುರುತಿಸಿದರು. ಇದರಿಂದ ಆಮದು ಮಾಡಿದ ತಂತ್ರಜ್ಞಾನವನ್ನು ತಮ್ಮದೇ ಎಂದು ತೋರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಕುರಿತು ತೀವ್ರ ಚರ್ಚೆ ಶುರುವಾಯಿತು.

ವಿಶ್ವವಿದ್ಯಾಲಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯ ಅಧಿಕೃತ ಸ್ಪಷ್ಟನೆ ನೀಡಿತು. “ಗಲ್ಗೋಟಿಯಾಸ್ ಈ ರೋಬೋಡಾಗ್ ನ್ನು ನಿರ್ಮಿಸಿಲ್ಲ, ನಾವು ನಿರ್ಮಿಸಿದ್ದೇವೆ ಎಂದು ಹೇಳಿಯೂ ಇಲ್ಲ. ಆದರೆ ನಾವು ನಿರ್ಮಿಸುತ್ತಿರುವುದು ಇಂತಹ ತಂತ್ರಜ್ಞಾನಗಳನ್ನು ಭವಿಷ್ಯದಲ್ಲಿ ಭಾರತದಲ್ಲೇ ವಿನ್ಯಾಸಗೊಳಿಸಿ, ಇಂಜಿನಿಯರಿಂಗ್ ಮಾಡಿ, ತಯಾರಿಸುವ ಮನಸ್ಸುಗಳು ಎಂದು ಹೇಳಿತು.

ಯುನಿಟ್ರೀಯಿಂದ ಖರೀದಿಸಿದ ಈ ರೋಬೋಡಾಗ್ ನಮ್ಮ ಪಯಣದ ಒಂದು ಹಂತ ಮಾತ್ರ. ಇದು ಕೇವಲ ಪ್ರದರ್ಶನ ಯಂತ್ರವಲ್ಲ; ನಮ್ಮ ವಿದ್ಯಾರ್ಥಿಗಳು ಇದನ್ನು ಪರೀಕ್ಷಿಸಿ, ಪ್ರಯೋಗ ಮಾಡಿ, ತಮ್ಮ ಜ್ಞಾನವನ್ನು ವಿಸ್ತರಿಸುತ್ತಿದ್ದಾರೆ,” ಎಂದು ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ವಿವಿ ತಿಳಿಸಿದೆ.

Galgotias University professor Neha Singh
ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್-ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ! Video

ಈ ವಿವಾದದ ಬಳಿಕ, ಸರ್ಕಾರದ ಮೂಲಗಳ ಪ್ರಕಾರ, ಎಐ ಸಮಿಟ್ ಎಕ್ಸ್‌ಪೋದಲ್ಲಿನ ತಮ್ಮ ಸ್ಥಳವನ್ನು ಖಾಲಿ ಮಾಡಲು ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ.

ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಗ್ಲೋಬಲ್ ಸೌತ್‌ನಲ್ಲಿ ನಡೆಯುತ್ತಿರುವ ಮೊದಲ ಜಾಗತಿಕ ಎಐ ಶೃಂಗಸಭೆಯಾಗಿದ್ದು, 110ಕ್ಕೂ ಹೆಚ್ಚು ದೇಶಗಳು ಮತ್ತು 30 ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಿವೆ. ಸುಮಾರು 20 ದೇಶಗಳ ರಾಷ್ಟ್ರಾಧ್ಯಕ್ಷರು ಅಥವಾ ಸರ್ಕಾರದ ಮುಖ್ಯಸ್ಥರು ಹಾಗೂ 45 ಸಚಿವರು ಈ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. “ಸರ್ವಜನ ಹಿತಾಯ, ಸರ್ವಜನ ಸುಖಾಯ” ಎಂಬ ಭಾರತದ ದೃಷ್ಟಿಕೋನದ ಅನ್ವಯ, ಕೃತಕ ಬುದ್ಧಿಮತ್ತೆಯ ಪರಿವರ್ತನಾ ಸಾಮರ್ಥ್ಯವನ್ನು ಅನ್ವೇಷಿಸುವುದು ಈ ಸಮಿಟ್‌ನ ಉದ್ದೇಶವಾಗಿದೆ.

ರೋಬೋಡಾಗ್ ವಿವಾದದ ಕೇಂದ್ರಬಿಂದು ಗಲ್ಗೋಟಿಯಾಸ್ ಪ್ರಾಧ್ಯಾಪಕಿ ನೇಹಾ ಸಿಂಗ್ ಯಾರು?

ದೆಹಲಿ ಇಂಡಿಯಾ ಎಐ ಸಮಿಟ್‌ನಲ್ಲಿ ಪ್ರದರ್ಶಿಸಲಾದ ರೋಬೋಡಾಗ್ ವಿವಾದದ ಹಿನ್ನೆಲೆಯಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಗಮನ ಸೆಳೆದಿದ್ದಾರೆ. ವಿವಾದದ ನಂತರ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ “Open to Work” ಎಂದು ಕಾಣಿಸಿಕೊಳ್ಳುತ್ತಿರುವುದು ಕೂಡ ಚರ್ಚೆಗೆ ಕಾರಣವಾಗಿದೆ.

ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ನವೆಂಬರ್ 2023ರಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲು ಗ್ರೇಟರ್ ನೋಯ್ಡಾದ ಶಾರ್ದಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಅದಲ್ಲದೆ, ಕರಿಯರ್ ಲಾಂಚರ್ ಸಂಸ್ಥೆಯಲ್ಲಿ ವರ್ಬಲ್ ಅಬಿಲಿಟಿ ಮೆಂಟರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಇದಕ್ಕೂ ಮೊದಲು ಅವರು ಗಿಟಾಂ (GITAM) ಸಂಸ್ಥೆಯಲ್ಲೂ ಕೆಲಸ ಮಾಡಿದ್ದರು. ನೇಹಾ ಸಿಂಗ್ ಅವರು 2006ರಲ್ಲಿ ದೇವಿ ಅಹಿಲ್ಯಾ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದು, ಅದಕ್ಕೂ ಮುನ್ನ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆದಿದ್ದಾರೆ.

Galgotias University professor Neha Singh
Watch | ಎಐ ಸಮ್ಮಿಟ್: ಚೀನಾದ ರೋಬೋಡಾಗ್ ವಿವಾದ! ಖಾಲಿ ಮಾಡುವಂತೆ ಗ್ಯಾಲ್ಗೋಟಿಯಾಸ್ ವಿವಿಗೆ ಸೂಚನೆ?

ವಿವಾದ ಕುರಿತು ಸ್ಪಷ್ಟನೆ
ರೋಬೋಡಾಗ್ ನ್ನು ಸ್ವದೇಶಿ ಅಭಿವೃದ್ಧಿ ಎಂದು ಹೇಳುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ನೇಹಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಸ್ಪಷ್ಟವಾಗಿ ಹೇಳಲಾಗದ ಕಾರಣದಿಂದ ಈ ವಿವಾದ ಉಂಟಾಗಿದೆ, ಬಹುಶಃ ನಾನು ಅದನ್ನು ಸರಿಯಾಗಿ ಸಂವಹನ ಮಾಡಲಿಲ್ಲ, ಇದರ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆ. ಅದು ತುಂಬಾ ಉತ್ಸಾಹ ಮತ್ತು ವೇಗದಲ್ಲಿ ನಡೆದಿದ್ದು, ನಾನು ಸಾಮಾನ್ಯವಾಗಿ ಹೇಳುವಷ್ಟು ಸ್ಪಷ್ಟವಾಗಿ ಹೇಳಲಾಗಿರಲಿಲ್ಲ ಎಂದರು.

ರೋಬೋಡಾಗ್ ಈಗ ಎಲ್ಲಿದೆ?
ಪ್ರದರ್ಶನದಿಂದ ರೋಬೋಡಾಗ್ ತೆಗೆದುಹಾಕಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಯಂತ್ರವನ್ನು ಮತ್ತೆ ವಿಶ್ವವಿದ್ಯಾಲಯದ ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅದರ ರಚನೆ (ಅನಾಟಮಿ), ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡಲು ಇದನ್ನು ಪ್ರಯೋಗಾಲಯಕ್ಕೆ ಖರೀದಿಸಲಾಗಿದೆ. ಅದು ಈಗ ಲ್ಯಾಬ್‌ನಲ್ಲಿದೆ ಎಂದು ಹೇಳಿದರು.

ಇದಲ್ಲದೆ, ಪೆವಿಲಿಯನ್‌ನಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಎಐ ಅನ್ವಯಿಕೆಗಳತ್ತವೂ ಗಮನ ಹರಿಸುವಂತೆ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com