'UPIಗೆ ಬುನಾದಿ ಹಾಕಿದ್ದೇ ನಾವು.. ಆದ್ರೆ ಮೋದಿ ಸರ್ಕಾರದಿಂದ ಕ್ರೆಡಿಟ್ ಹೈಜಾಕ್': ಕಾಂಗ್ರೆಸ್ ನಾಯಕರಿಗೆ ಚಿದಂಬರಂ ವಿಡಿಯೋ ತಿರುಗೇಟು!

'ಗ್ರೂಪ್ ಪ್ರಾಜೆಕ್ಟ್‌ನಲ್ಲಿ ಒಬ್ಬ ಸಹಪಾಠಿ ಇರುತ್ತಾನೆ. ಆತ ಯಾವುದೇ ಕೆಲಸ ಮಾಡುವುದಿಲ್ಲ. ಆದರೆ ಆತ ಎಲ್ಲಾ ಕ್ರೆಡಿಟ್ ತೆಗೆದುಕೊಳ್ಳುತ್ತಾನೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Congress takes dig at PM Modi
ಯುಪಿಐ ಮತ್ತು ಪವನ್ ಖೇರಾ
Updated on

ನವದೆಹಲಿ: AI ಶೃಂಗಸಭೆಯಲ್ಲಿ ಭಾರತದ ಯುಪಿಐ ಪಾವತಿ ಸೇವೆಯನ್ನು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯಲ್ ಮಾಕ್ರನ್ ಹೊಗಳಿದ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಮುಗಿ ಬಿದ್ದಿರುವ ಕಾಂಗ್ರೆಸ್ ಯುಪಿಎಗೆ ಬುನಾದಿ ಹಾಕಿದ್ದು ತನ್ನ ಸರ್ಕಾರ, ಆದರೆ ಮೋದಿ ಸರ್ಕಾರ ಅದರ ಕ್ರೆಡಿಟ್ ಹೈಜಾಕ್ ಮಾಡಿತು ಎಂದು ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಡಿಜಿಟಲ್ ಪೇಮೆಂಟ್‌ಗೆ ಶಿಫಾರಸು ಮಾಡಿದ್ದೇ ನಾವು ಎಂದು ಹೇಳಿದ್ದಾರೆ. 'ಗ್ರೂಪ್ ಪ್ರಾಜೆಕ್ಟ್‌ನಲ್ಲಿ ಒಬ್ಬ ಸಹಪಾಠಿ ಇರುತ್ತಾನೆ. ಆತ ಯಾವುದೇ ಕೆಲಸ ಮಾಡುವುದಿಲ್ಲ. ಆದರೆ ಆತ ಎಲ್ಲಾ ಕ್ರೆಡಿಟ್ ತೆಗೆದುಕೊಳ್ಳುತ್ತಾನೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಯುಪಿಐ ಆರಂಭಿಕ ಪರಿಕಲ್ಪನೆಯು 2012–2013ರಲ್ಲಿ ಆಗಿನ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ನೇತೃತ್ವದ ನಡೆಯಿತು. ಯುಪಿಎ ಸರ್ಕಾರ ನೇಮಿಸಿದ ಸಮಿತಿಯು ಡಿಸೆಂಬರ್ 2013 ರಲ್ಲಿ ಮೊಬೈಲ್ ಆಧಾರಿತ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಶಿಫಾರಸು ಮಾಡಿತ್ತು.

2010 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಅಭಿವೃದ್ಧಿಪಡಿಸಿದ ತಕ್ಷಣದ ಪಾವತಿ ಸೇವೆಯು ಇದಕ್ಕೆ ತಾಂತ್ರಿಕ ಬೆನ್ನೆಲುಬು ಹಾಕಿತ್ತು. ಎನ್‌ಪಿಸಿಐ 2013-2014 ರಲ್ಲಿ UPI ಆಗುವ ಕೋರ್ ಆರ್ಕಿಟೆಕ್ಚರ್ ಅನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿತು ಎಂದು ಬರೆದಿದ್ದಾರೆ.

Congress takes dig at PM Modi
PM Modi at AI Action Summit: ಜಗತ್ತಿನ ಅತಿ ಹೆಚ್ಚು AI talent ಪೂಲ್ ಭಾರತದಲ್ಲಿದೆ

ಪವನ್ ಖೇರಾ ಹೇಳಿಕೆಗೆ ಚಿದಂಬರಂ ವಿಡಿಯೋ ತಿರುಗೇಟು

ಇನ್ನು ಪವನ್‌ ಖೇರಾ ಹೇಳಿಕೆಗೆ ನೆಟ್ಟಿಗರು ಈ ಹಿಂದೆ ರಾಜ್ಯಸಭೆಯಲ್ಲಿ ಚಿದಂಬರಂ ಮಾಡಿದ ಭಾಷಣದ ವಿಡಿಯೋವನ್ನು ಅಪ್ಲೋಡ್‌ ಮಾಡಿ ತಿರುಗೇಟು ನೀಡುತ್ತಿದ್ದಾರೆ. ಈ ಭಾಷಣದಲ್ಲಿ ಚಿದಂಬರಂ ಹಳ್ಳಿಯಲ್ಲಿರುವ ಸಣ್ಣ ವ್ಯಾಪಾರಿಗಳು ಡಿಜಿಟಲ್‌ ಮೂಲಕ ಹಣವನ್ನು ಕಳುಹಿಸಲು ಸಾಧ್ಯವೇ? ಅಷ್ಟೊಂದು ಮೂಲಸೌಕರ್ಯ ಇದೆಯೇ ಎಂದು ಪ್ರಶ್ನಿಸಿದ್ದರು.

ಮ್ಯಾಕ್ರನ್‌ ಹೇಳಿದ್ದೇನು?

ಹತ್ತು ವರ್ಷಗಳ ಹಿಂದೆ ಮುಂಬೈನ ಬೀದಿ ಬದಿಯ ವ್ಯಾಪಾರಿಯೊಬ್ಬರು ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ವಿಳಾಸವಿರಲಿಲ್ಲ, ದಾಖಲೆಗಳು ಇರಲಿಲ್ಲ. ಆದರೆ ಇಂದು ಅದೇ ವ್ಯಾಪಾರಿ ತಮ್ಮ ಫೋನ್‌ನ್‌ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದಾರೆ. ಭಾರತವು ಬೇರೆ ಯಾವುದೇ ರಾಷ್ಟ್ರವು ಸಾಧಿಸಲಾಗದಂತಹ ಸಾಧನೆ ಮಾಡಿದ್ದು 1.4 ಶತಕೋಟಿ ಜನರಿಗೆ ಡಿಜಿಟಲ್ ಗುರುತನ್ನು ನೀಡಿದೆ ಎಂದು ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com