ಕರ್ನಾಟಕ ಸೇರಿದಂತೆ ದೇಶಾದ್ಯಂತ 58 ಎಂಜಿನಿಯರಿಂಗ್ ಕಾಲೇಜುಗಳು ಕ್ಲೋಸ್! ವಿದ್ಯಾರ್ಥಿಗಳ ಕಥೆ ಏನು?

ಪಿಯುಸಿ ನಂತರ ಎಂಜಿನಿಯರಿಂಗ್ ಸೇರಲು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಸಜ್ಜಾಗುತ್ತಿರುವುದರ ನಡುವೆಯೇ ದೇಶದಲ್ಲಿ ಸುಮಾರು 58 ಎಂಜಿನಿಯರಿಂಗ್ ಕಾಲೇಜುಗಳು ಕ್ಲೋಸ್ ಆಗಿದೆ ಎನ್ನುವ ಆಘಾತಕಾರಿ ಸುದ್ದಿ ಹೊರಬಂದಿದೆ.
Engineering College Students
58 ಎಂಜಿನಿಯರಿಂಗ್ ಕಾಲೇಜುಗಳು ಕ್ಲೋಸ್Online Desk
Updated on

Engineering College Close: ಪಿಯುಸಿ (PUC) ನಂತರ ಎಂಜಿನಿಯರಿಂಗ್ (Engineering) ಸೇರಲು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಸಜ್ಜಾಗುತ್ತಿರುವುದರ ನಡುವೆಯೇ ದೇಶದಲ್ಲಿ ಸುಮಾರು 58 ಎಂಜಿನಿಯರಿಂಗ್ ಕಾಲೇಜುಗಳು ಕ್ಲೋಸ್ (Engineering College Close) ಆಗಿದೆ ಎನ್ನುವ ಆಘಾತಕಾರಿ ಸುದ್ದಿ ಹೊರಬಂದಿದೆ. ಹೌದು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಪ್ರಕಾರ, 2025–26 ಶೈಕ್ಷಣಿಕ ವರ್ಷದಲ್ಲಿ ದೇಶಾದ್ಯಂತ ಸುಮಾರು 58 ಎಂಜಿನಿಯರಿಂಗ್ ಕಾಲೇಜುಗಳನ್ನು (Engineering College) ವಿವಿಧ ಕಾರಣಗಳಿಂದಾಗಿ ಮುಚ್ಚಲಾಗಿದೆ. ಆ ಕುರಿತ ವರದಿ ಇಲ್ಲಿದೆ.

Engineering College Students
ಕರ್ನಾಟಕದಲ್ಲಿ ಈ ವರ್ಷ ಒಟ್ಟು ಎಂಜಿನಿಯರಿಂಗ್ ಸೀಟುಗಳ ಪೈಕಿ ಶೇ.25 ಖಾಸಗಿ, ಡೀಮ್ಡ್ ವಿವಿ ಪಾಲು

ಯಾವ ರಾಜ್ಯದಲ್ಲಿ ಎಷ್ಟು ಕಾಲೇಜು ಕ್ಲೋಸ್?
AICTE ಪ್ರಕಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದ್ರೆ 12 ಕಾಲೇಜು ಮುಚ್ಚಲ್ಪಟ್ಟಿದೆ. ಇದರೊಂದಿಗೆ, ಮಧ್ಯಪ್ರದೇಶದಲ್ಲಿ 8, ತೆಲಂಗಾಣ ಹಾಗೂ ಪಂಜಾಬ್ ರಾಜ್ಯಗಳಲ್ಲಿ ತಲಾ 4 ಕಾಲೇಜುಗಳು ಕ್ಲೋಸ್ ಆಗಿದೆ. ಜೊತೆಗೆ ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 3 ಕಾಲೇಜುಗಳು, ಜೊತೆಗೆ ಕರ್ನಾಟಕ ಸೇರಿದಂತೆ ಗುಜರಾತ್, ತಮಿಳುನಾಡಿನಲ್ಲಿ ತಲಾ 2 ಕಾಲೇಜುಗಳು ಮುಚ್ಚಲ್ಪಟ್ಟಿ ವೆ. ಇನ್ನು, ಹರಿಯಾಣ, ಒಡಿಶಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಲಾ 1 ಎಂಜಿನಿಯರಿಂಗ್ ಕಾಲೇಜುಗಳು ಬಂದ್ ಆಗಿದೆ.

ಏತನ್ಮಧ್ಯೆ, ಕ್ಲೋಸ್ ಆಗಿರುವ 58 ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 3 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ 55 ಕಾಲೇಜುಗಳು ಖಾಸಗಿ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಾಗಿದೆ. ಅದ್ರಲ್ಲೂ 2 ಕಾಲೇಜುಗಳು ಕರ್ನಾಟಕ ರಾಜ್ಯದ್ದೇ ಆಗಿರುವ ಕಾರಣ ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ ಎಂಜಿನಿಯರಿಂಗ್ ಸೀಟುಗಳು ಕಡಿಮೆ ಆಗಲಿದೆ.

Engineering College Students
ಕರ್ನಾಟಕದಲ್ಲಿ ಕೇವಲ ಶೇ. 17 ರಷ್ಟು ಎಂಜಿನಿಯರಿಂಗ್ ಪದವೀಧರರು ಮಾತ್ರ ಉದ್ಯೋಗಕ್ಕೆ ಅರ್ಹರು: ವರದಿ

ಕ್ಲೋಸ್ ಆಗಲು ಕಾರಣ ಏನು?
AICTE ಪ್ರಕಾರ, ಬಂದ್ ಆಗಿರುವ ಈ ಕಾಲೇಜುಗಳಲ್ಲಿ, "ವಿದ್ಯಾರ್ಥಿಗಳ ದಾಖಲಾತಿ ಕಡಿಮೆ, ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಪಾಲಿಸದಿರುವುದು" ಸೇರಿದಂತೆ ವಿವಿಧ ಕಾರಣಗಳಿಗಾಗಿ ಕ್ಲೋಸ್ ಮಾಡಲು ಆದೇಶಿಸಲಾಗಿದೆ ಎಂದು ತಿಳಿಸಿದೆ.

ಈಗ ಓದುತ್ತಿರುವ ವಿದ್ಯಾರ್ಥಿಗಳ ಕಥೆ ಏನು?
ದೇಶದಲ್ಲಿ 58 ಎಂಜಿನಿಯರಿಂಗ್ ಕಾಲೇಜುಗಳು ಕ್ಲೋಸ್ ಆಗಿರುವುದರಿಂದ, ಆ ಕಾಲೇಜುಗಳಲ್ಲಿ ೯೫೦ ತಾಂತ್ರಿಕ ಕೋರ್ಸ್‌ಗಳು ಕೂಡು ಬಂದ್ ಆಗಲಿದೆ. ಆದರೆ, ಈಗಾಗಲೇ ದಾಖಲಾದ ವಿದ್ಯಾರ್ಥಿಗಳಿಗೆ ತಮ್ಮ ಪದವಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com