1 ಲಕ್ಷ ಕೊಟ್ಟು Flipkartನಲ್ಲಿ iPhone ಆರ್ಡರ್, ಡೆಲಿವರಿ ಆಗಿದ್ದು ಮಾತ್ರ Beard Oil! ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ಕಿದೆಷ್ಟು?

ಫ್ಲಿಪ್‌ಕಾರ್ಟ್ ಬಳಕೆದಾರ ಓರ್ವ ತನ್ನ ಕನಸಿನ ಐಫೋನ್ ಆರ್ಡರ್ ಮಾಡಿದ್ದಾನೆ; ಆದ್ರೆ, ಡೆಲಿವರಿ ನಂತರ ಗ್ರಾಹಕನಿಗೆ ಕಾದಿತ್ತು ನೋಡಿ ಶಾಕ್! ಅದುವೇ, ಐಫೋನ್ ಬದಲು ಬಂದಿದ್ದು, ಗಡ್ಡ ಬೆಳೆಸುವ ಎಣ್ಣೆ! ಮುಂದೇನಾಯ್ತು ಗೊತ್ತಾ?
Consumer Court fined Flipkart
ಫ್ಲಿಪ್‌ಕಾರ್ಟ್ ಬಳಕೆದಾರನೋರ್ವ ಐಫೋನ್ ಆರ್ಡರ್ ಮಾಡಿದ್ದು, ಡೆಲಿವರಿ ಆಗಿದ್ದು ಮಾತ್ರ ಗಡ್ಡ ಬೆಳೆಸುವ ಎಣ್ಣೆ!Online Desk
Updated on

ಮುಂಬೈ (ಮಹಾರಾಷ್ಟ್ರ): ಐಫೋನ್ - ಇದು ಎಷ್ಟೋ ಜನರ ಕನಸಿನ ಫೋನ್; ಅದರಂತೆ. ಈ ಮೊಬೈಲ್ ಫೋನ್ ಖರೀದಿಸಲು ಲಕ್ಷಾಂತರ ಜನರು ಭಾರತದಲ್ಲಿ ಸಾಲದ ಮೊರೆ ಹೋಗುತ್ತಿದ್ದರೆ. ಅಂದರೆ, ಭಾರತದಲ್ಲಿ ಶೇ. 70 ಐಫೋನ್ ಬಳಕೆದಾರರು EMI ಮೂಲಕವೇ ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದ್ರೆ ಐಫೋನ್ ಗೆ ಭಾರತದಲ್ಲಿ ಎಷ್ಟರ ಮಟ್ಟಿಗೆ ಕ್ರೇಜ್ ಇದೆ ಅಂತ; ಈ ಎಲ್ಲದರ ನಡುವೆ, ಓರ್ವ ಫ್ಲಿಪ್‌ಕಾರ್ಟ್ ಬಳಕೆದಾರ ತನ್ನ ಕನಸಿನ ಐಫೋನ್ ಖರೀದಿ ಮಾಡಿದ್ದಾನೆ; ಆದ್ರೆ, ಡೆಲಿವರಿ ನಂತರ ಗ್ರಾಹಕನಿಗೆ ಕಾದಿತ್ತು ನೋಡಿ ಶಾಕ್! ಅದುವೇ, ಐಫೋನ್ ಬದಲು ಬಂದಿದ್ದು, ಗಡ್ಡ ಬೆಳೆಸುವ ಎಣ್ಣೆ! ಮುಂದೇನಾಯ್ತು ಗೊತ್ತಾ?

ಏನಿದು ಘಟನೆ?

ಮುಂಬೈನ ಪೊವಾಯ್ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್ ಮೂಲಕ 2023ರಲ್ಲಿ ₹1,11,793 ಪಾವತಿಸಿ ನೋ-ಕಾಸ್ಟ್ ಇಎಂಐ ಮೂಲಕ Apple iPhone 14 Pro ಆರ್ಡರ್ ಮಾಡಿದ್ದರು. ಆದ್ರೆ, ಪಾರ್ಸೆಲ್ ಬಂದಾಗ ಅದರೊಳಗೆ ಐಫೋನ್ ಬದಲಿಗೆ ಗಡ್ಡ ಬೆಳೆಸುವ ಎಣ್ಣೆಯ (Beard Growth Oil) ಬಾಟಲಿಯನ್ನು ತಲುಪಿಸಲಾಗಿತ್ತು. ಇನ್ನು, ಗ್ರಾಹಕರ ತಕ್ಷಣವೇ ಅಗತ್ಯ ದಾಖಲೆಗಳೊಂದಿಗೆ ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್‌ಗೆ ದೂರು ನೀಡಿದರೂ, ಕಂಪನಿಯು ಯಾವುದೇ ಪರಿಹಾರ ನೀಡದೆ ಪದೇ ಪದೇ ದೂರನ್ನು ಕ್ಲೋಸ್ ಮಾಡಿತ್ತು. ಇದರಿಂದ ಬೇಸತ್ತ ಗ್ರಾಹಕರು ಮುಂಬೈನ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

Consumer Court fined Flipkart
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದೀರಾ? ITR ಸಲ್ಲಿಸಿದ ನಂತರವೂ ಈ ದಾಖಲೆಗಳನ್ನು 6 ವರ್ಷ ಕಡ್ಡಾಯವಾಗಿ ಇಟ್ಟುಕೊಳ್ಳಿ! ಯಾಕೆ ಗೊತ್ತಾ?

ಮುಂದುವರೆದು, ದೂರು ದಾಖಿಲಿಸಿಕೊಂಡು ವಿಚಾರಣೆ ನಡೆಸಿದ, ಮುಂಬೈನ ಹೆಚ್ಚುವರಿ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಮತ್ತು ಅದರ ಸೆಲ್ಲರ್ ಇಬ್ಬರನ್ನೂ ದೋಷಿ ಎಂದು ಘೋಷಿಸಿ, ಒಟ್ಟು ₹1.8 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ನೀಡಲು ಆದೇಶಿಸಿದೆ. ಅಂದ್ರೆ, ಐಫೋನ್ ಬೆಲೆಯಾದ ₹1,11,793 ಅನ್ನು 9% ವಾರ್ಷಿಕ ಬಡ್ಡಿಯೊಂದಿಗೆ ವಾಪಸ್ ನೀಡಬೇಕು. ಜೊತೆಗೆ, ಗ್ರಾಹಕರಿಗೆ ಉಂಟುಮಾಡಿದ ಮಾನಸಿಕ ತೊಂದರೆಗಾಗಿ ₹50,000 ಪರಿಹಾರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ ₹20,000 ಪಾವತಿಸಬೇಕು ಎಂದು ತೀರ್ಪು ನೀಡಿದೆ.

ಇದೆ ವೇಳೆ, "ಯಾವುದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕೇವಲ ಮಧ್ಯವರ್ತಿ ಎಂದು ಹೇಳಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಗ್ರಾಹಕರು ತಪ್ಪು ಡೆಲಿವರಿ ಆಗಿದೆ ಎಂದು ತಕ್ಷಣವೇ ವರದಿ ಮಾಡಿದಾಗ, ಅದಕ್ಕೆ ಸೂಕ್ತ ಪರಿಹಾರ ಒದಗಿಸುವುದು ಕಂಪನಿಯ ಜವಾಬ್ದಾರಿಯಾಗಿದೆ" ಎಂದು ನ್ಯಾಯಾಲಯ ಹೇಳಿದೆ.

Consumer Court fined Flipkart
ದೇಶದಲ್ಲಿ ಶೀಘ್ರ ಪ್ಲಾಸ್ಟಿಕ್ ನೋಟು? 10, 20 ರೂ ಮುಖಬೆಲೆಯ ಪಾಲಿಮರ್ ನೋಟುಗಳ ಮುದ್ರಣಕ್ಕೆ RBI ಮುಂದು; ಕಾಗದದ ನೋಟುಗಳಿಗಿಂತ ಇವು ಹೇಗೆ ಭಿನ್ನ?

ಏತನ್ಮಧ್ಯೆ, ಈ ಪ್ರಕರಣದಲ್ಲಿ ಆಪಲ್ ಕಂಪನಿಯನ್ನೂ ಆರೋಪಿ ಮಾಡಲಾಗಿತ್ತು. ಆದರೆ, ಇದು ಕೇವಲ ಡೆಲಿವರಿ ಮತ್ತು ಮಾರಾಟಗಾರರ ತಪ್ಪಾಗಿರುವುದರಿಂದ ಆಪಲ್ ಕಂಪನಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com