ಕಂಟೆಂಟ್ ಕ್ರಿಯೇಟರ್ ಆಗಲು ₹35 ಲಕ್ಷ ಸಂಬಳದ ಉದ್ಯೋಗ ತೊರೆದ ಟೆಕ್ಕಿ ದಂಪತಿ; ಒಂದೇ ವರ್ಷದಲ್ಲಿ ₹1 ಕೋಟಿಗೂ ಹೆಚ್ಚು ಆದಾಯ!

2023 ರಲ್ಲಿ ತಮ್ಮ ಸಾಫ್ಟ್ ವೇರ್ ಉದ್ಯೋಗವನ್ನು ತೊರೆದ ಮುಸ್ಕಾನ್ ಮಿತ್ತಲ್ ಮತ್ತು ಆಶಿಶ್ ಗುಪ್ತಾ ಎಂಬ ದಂಪತಿ, ಈಗ ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಕೆಲಸ ಮಾಡುತ್ತಿದ್ದಾರೆ.
Techie couple quit ₹35 LPA jobs to become influencers, earned over ₹1 crore in just one year
ಮುಸ್ಕಾನ್ ಮಿತ್ತಲ್ ಮತ್ತು ಆಶಿಶ್
Updated on

ಪ್ರಸ್ತುತ ಯುವಜನತೆ ಸಾಮಾಜಿಕ ಮಾಧ್ಯಮದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಕಂಟೆಂಟ್ ಕ್ರಿಯೇಟರ್ ಗಳಾಗಿ ಲಕ್ಷಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ. ಅದರಂತೆ ಜೋಡಿಯೊಂದು ಕಂಟೆಂಟ್ ಕ್ರಿಯೇಟಿಂಗ್ ಕಡೆ ಹೆಚ್ಚು ಗಮನಹರಿಸಲು ವರ್ಷಕ್ಕೆ 35 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಉದ್ಯೋಗ ತೊರೆದು ಕಂಟೆಂಟ್ ಕ್ರಿಯೇಟರ್ ಆಗಿ ಒಂದೇ ವರ್ಷದಲ್ಲಿ 1 ಕೋಟಿಗೂ ಹೆಚ್ಚು ಆದಾಯ ಗಳಿಸಿದ್ದಾರೆ.

2023 ರಲ್ಲಿ ತಮ್ಮ ಸಾಫ್ಟ್ ವೇರ್ ಉದ್ಯೋಗವನ್ನು ತೊರೆದ ಮುಸ್ಕಾನ್ ಮಿತ್ತಲ್ ಮತ್ತು ಆಶಿಶ್ ಗುಪ್ತಾ ಎಂಬ ದಂಪತಿ, ಈಗ ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಕೆಲಸ ಮಾಡುತ್ತಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ದಂಪತಿ, ತಾವು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಎಷ್ಟು ಗಳಿಸುತ್ತಿದ್ದೇವು ಮತ್ತು ಕಂಟೆಂಟ್ ಕ್ರಿಯೇಟರ್ ಆಗಿ ಎಷ್ಟು ಸಂಪಾದಿಸುತ್ತಿದ್ದೇವೆ ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ ಆರಂಭದಲ್ಲಿ ಗಳಿಸಿದ ಹಣವೇಷ್ಟು ಮತ್ತು ಈಗ ಎಷ್ಟು ಗಳಿಸುತ್ತಿದ್ದೇವೆ ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.

Techie couple quit ₹35 LPA jobs to become influencers, earned over ₹1 crore in just one year
4.2 ಕೋಟಿ ರೂ ವೇತನದ ಉದ್ಯೋಗ ತೊರೆದು ರೆಸ್ಟೋರೆಂಟ್ ಪ್ರಾರಂಭಿಸಿದ ಮಾಜಿ ಟೆಕ್ಕಿ; ಹೊಸ ಉದ್ಯಮದಿಂದ ಗಳಿಸಿದ್ದೆಷ್ಟು ಗೊತ್ತೇ?

ಟೆಕ್ಕಿಯಿಂದ ಇನ್ಫುಲೆನ್ಸರ್ ವರೆಗೆ

ತಮ್ಮ ವಿಯೆಟ್ನಾಂ ಪ್ರವಾಸವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಈ ದಂಪತಿಗಳ ಕಂಟೆಂಟ್ ಕ್ರಿಯೇಟರ್ ಜರ್ನಿ ಆರಂಭವಾಯಿತು ಮತ್ತು ಅವರ ಈ ವಿಡಿಯೋ 20,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿತು. ಇಂದು, ಅವರ ಕಂಟೆಂಟ್ ಪ್ರಾಥಮಿಕವಾಗಿ ಪ್ರಯಾಣದ ಮೇಲೆ ಕೇಂದ್ರೀಕರಿಸುತ್ತದೆ, ಆದರೆ ಅವರು ಆರೋಗ್ಯ ಇತ್ಯಾದಿಗಳ ಬಗ್ಗೆಯೂ ಪೋಸ್ಟ್ ಮಾಡುತ್ತಾರೆ.

"ನಾವು ಕಳೆದ 3 ವರ್ಷಗಳಿಂದ ಕಂಟೆಂಟ್ ಕ್ರಿಯೇಟ್ ಮಾಡುತ್ತಿದ್ದೇವೆ. ನಮ್ಮ ಜೀವನದ ಕೆಲವು ಸಂಗತಿಗಳನ್ನು ಕೇಳುತ್ತ, ಸಾವಿರಾರು ಜನ ಡಿಎಂ ಮಾಡಿದ್ದೀರಿ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ" ಎಂದು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದಾರೆ.

"ಇದಕ್ಕು ಮೊದಲು, ನಾವಿಬ್ಬರೂ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದೇವೆ. ನಾನು ಡೇಟಾ ವಿಶ್ಲೇಷಕನಾಗಿದ್ದೆ ಮತ್ತು ನನಗೆ ವರ್ಷಕ್ಕೆ ₹12 ಲಕ್ಷ ಸಂಬಳ ಇತ್ತು" ಎಂದು ಆಶಿಶ್ ಬಹಿರಂಗಪಡಿಸಿದ್ದಾರೆ.

ಇನ್ನು ಮುಸ್ಕಾನ್ ಅವರು ವರ್ಷಕ್ಕೆ ₹23 ಲಕ್ಷ ಸಂಬಳದೊಂದಿಗೆ ಸಾಫ್ಟ್‌ವೇರ್ ಡೆವಲಪರ್ ಆಗಿದ್ದರು. ಇಬ್ಬರೂ ಸೇರಿ ಒಟ್ಟು 35 ಲಕ್ಷ ಸಂಪಾದಿಸುತ್ತಿದ್ದೇವು ಎಂದು ಅವರು ತಿಳಿಸಿದ್ದಾರೆ.

"ನಾವು ಮೇ 2023 ರಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಲು ಆರಂಭಿಸಿದೆವು. ಅಕ್ಟೋಬರ್‌ನಲ್ಲಿ 15,000 ರೂ.ಗೆ ನಮ್ಮ ಮೊದಲ ಪಾವತಿಸಿದ ಸಹಯೋಗವನ್ನು ಪಡೆದುಕೊಂಡಿದ್ದೇವೆ. ನಾವು ಇನ್ನೂ ಇದನ್ನು ಅರೆಕಾಲಿಕವಾಗಿ ಮಾಡುತ್ತಿದ್ದೆವು ಮತ್ತು ಆ ವರ್ಷ ನಾವು ₹6.5 ಲಕ್ಷ ಗಳಿಸಿದ್ದೇವೆ" ಎಂದು ದಂಪತಿ ವಿವರಿಸಿದ್ದಾರೆ.

2024 ರಲ್ಲಿ, ಮುಸ್ಕಾನ್ ಮತ್ತು ಆಶಿಶ್ ಇಬ್ಬರೂ ಕೆಲಸ ತೊರೆದು ಪೂರ್ಣಾವಧಿ ಕಂಟೆಂಟ್ ಕ್ರಿಯೇಟ್ ಮಾಡಲು ಆರಂಭಿಸಿದೆವು. ಪ್ರವಾಸಿ ಏಜೆನ್ಸಿಯೊಂದರ ಜೊತೆ ಒಪ್ಪಂದ ಮಾಡಿಕೊಂಡೆವು. ಇದರಿಂದ ಹೆಚ್ಚು ಆದಾಯ ಬರಲು ಆರಂಭವಾಯಿತು. ಈಗ 2025ರಲ್ಲಿ ಬರೋಬ್ಬರಿ 1.09 ಕೋಟಿ ರೂ. ಗಳಿಸಿದೆವು ಎಂದು ದಂಪತಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com